ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಪುತ್ತೂರು ಘಟಕದ ಸಂಯೋಜನೆಯಲ್ಲಿ ಜಿಲ್ಲಾ ಮಟ್ಟದ ಕಾರ್ಯಾಗಾರ, ಸನ್ಮಾನ ಕಾರ್ಯಕ್ರಮ

0

ಬಡಗನ್ನೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ.) ಮೆಲ್ಕಾರು, ಬಂಟ್ವಾಳ ನೇತೃತ್ವದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಪುತ್ತೂರು ಘಟಕದ ಸಂಯೋಜನೆಯಲ್ಲಿ ಜಿಲ್ಲಾ ಮಟ್ಟದ ಕಾರ್ಯಾಗಾರ ಆ.17ರಂದು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಮೆಲ್ಕಾರ್ ಹಿರಿಯರಸೇವಾ ಪ್ರತಿಷ್ಠಾನ(ರಿ) ನ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಪ್ರಾಸ್ತಾವಿಕ ಮಾತನಾಡಿ, ಸ್ವಾರ್ಥ ರಹಿತ ಸೇವೆಯಿಂದ ಸಮರ್ಪಣಾಭಾವದಲ್ಲಿ ತನ್ನನ್ನು ತಾನು ತೊಡಗಿಸಿಕೂಳ್ಳುವ ಮೂಲಕ ಸಮಾಜದ ಅಭಿವೃದ್ಧಿ ಪಡಿಸುವುದು ಇದರ ಪ್ರಮುಖ ಉದ್ದೇಶ. ಇದು ರಾಜಕೀಯ ರಹಿತ ಸಂಘಟನೆ, ಇಲ್ಲಿ ಎಲ್ಲರೂ ಸಮಾನರು. ಕುಟುಂಬದ ಕಾರ್ಯವೖೆಕರಿ ವೖೆಶಿಷ್ಠವಾಗಿರುತ್ತದೆ. ಪ್ರತಿಷ್ಠಾನದ ಮುಖಾಂತರ ಅನಾರೋಗ್ಯ ಕುಟುಂಬಕ್ಕೆ ಧನ ಸಹಾಯ, ನೀಡುವುದು, ಸರಕಾರದ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮಗಳು ಮಾಡಲಾಗುತ್ತಿದೆ ಎಂದು ಆವರು ಹೇಳಿದರು.

ಕಾರ್ಯಾಗಾರದ ಉದ್ಘಾಟನೆವನ್ನು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಹಿರಿಯರ ಸೇವಾ ಪ್ರತಿಷ್ಠಾನದ ಉತ್ತಮ ಸಮಾಜ ಸೇವೆ ಮಾಡುವುದರ ಜೊತೆಗೆ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಮಾಹಿತಿ ನೀಡುತ್ತಿದೆ.

ಮತ್ತು ಅನಾರೋಗ್ಯದಲ್ಲಿರುವ ಕುಟುಂಬಕ್ಕೆ ಧನ ಸಹಾಯ ನೀಡುತ್ತ ಉತ್ತಮ ಕೆಲಸ ಮಾಡುತ್ತಿರುವುದು ಸಂತಸದ ವಿಚಾರ, ಇಂದು ಉದ್ಘಾಟನೆಗೊಂಡ ದಿನ ನಿತ್ಯದ ಆಹಾರದಲ್ಲಿ ಸಿರಿಧಾನ್ಯಗಳ ಬಳಕೆ ಮತ್ತು ಮಹತ್ವ ಹಾಗೂ ಸಾವಯವ ಕೃಷಿಯ ಮಾಹಿತಿ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬರಲಿ ಇದರ ಸದುಪಯೋಗ ಪಡೆದುಕೊಂಡು ವಿಷಮುಕ್ತ ಆಹಾರ ಸೇವನೆ ಮಾಡಿಕೊಂಡು ಆರೋಗ್ಯಕರ ಜೀವನ ಮಾಡೋಣ ಎಂದು ಹೇಳಿದರು.

ಮುಖ್ಯ ಅಥಿತಿಯಾಗಿ ಭಾಗವಹಿಸಿದ ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು ಮಾತನಾಡಿ, ಹಿರಿಯ ನಾಗರಿಕ ಸಂಘವು ಕೌಟುಂಭಿಕವಾಗಿ ನೊಂದ ಕುಟುಂಬಕ್ಕೆ ಸಾಂತ್ವನ ನೀಡುವ ಕೇಂದ್ರವಾಗಿದೆ. ಸಾಮಾನ್ಯವಾಗಿ 50ರ ನಂತರ ಗೆಳೆತನ,ಮತ್ತು ನಮ್ಮಲ್ಲಿರುವ ತಾಳ್ಮೆ ಕಡಿಮೆಯಾಗುತ್ತದೆ ಮತ್ತು ಒಂಟಿತನದಿಂದ ಮಾನಸಿಕವಾಗಿ ಆರೋಗ್ಯದಲ್ಲಿ ಏರುಪೇರು ಉಂಟಾಗಲು ಆರಂಭವಾಗುತ್ತದೆ. ಇಂತಹ ಸಂಘಟನೆಯಲ್ಲಿ ಭಾಗವಹಿಸಿದಾಗ ನಾವೆಲ್ಲರೂ ಒಂದೇ ಕುಟುಂಬ ಸದಸ್ಯರಾಗಿ ಪರಸ್ಪರ ಮಾತನಾಡಿ ಸಂತೋಷ ಜೀವನ ಸಾಗಿಸಲು ಸಾಧ್ಯವಿದೆ.  ಜೊತೆಗೆ ಮಾಹಿತಿ ಕಾರ್ಯಕ್ರಮ, ಹಾಗೂ ಮನೋರಂಜನೆ ಇನ್ನಷ್ಟು ಖುಷಿ ತರುತ್ತದೆ ಎಂದರು.

ಪ್ರತಿಷ್ಠಾನದ ಟ್ರಸ್ಟಿ ಭುಜಬಲಿ ಧರ್ಮಸ್ಥಳ ಮಾತನಾಡಿ, ಹಿರಿಯರ ನಾಗರಿಕ ಪ್ರತಿಷ್ಠಾನ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತ ಬರುತ್ತಿದೆ. ನಿವೃತ್ತರು ಪ್ರವೃತ್ತಿಯಲ್ಲಿದ್ದುಕೊಂಡು ಮನ ಶಾಂತಿ ಮತ್ತು ನೆಮ್ಮದಿ ಜೀವನ ಮಾಡಲು ಇರುವಂತ ವೇದಿಕೆಯಾಗಿದೆ. ಇಲ್ಲಿ ವಿವಿಧ ರೀತಿಯ ವಿಚಾರಗೋಷ್ಠಿ ಜೊತೆಗೆ ಮನರಂಜನೆ ಕಾರ್ಯಕ್ರಮ ನಡೆಯುವುದರಿಂದ ಕೌಟುಂಬಿಕ ಸಮಸ್ಯೆ ಮರೆತು ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮವು ಬಂಟ್ವಾಳ ಮೆಲ್ಕಾರು  ಅ.ಕೆ.ಹಿ.ಸೇವಾ ಪ್ರತಿಷ್ಠಾನ (ರಿ.) ಗೌರವಾಧ್ಯಕ್ಷ ಪ್ರೊ ಎ.వి. ನಾರಾಯಾಣ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ವೇದಿಕೆಯಲ್ಲಿ ಮಹಿಳಾ ಘಟಕದ ಸಂಚಾಲಕಿ ಪ್ರೊ. ವತ್ಸಲಾ ರಾಜ್ಞಿ ಪುತ್ತೂರು ಕೋಶಾಧಿಕಾರಿ ಅನಾರು ಕೃಷ್ಣ ಶರ್ಮ  ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಗಿರಿಮನೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ.) ಮೆಲ್ಕಾರು, ಕೇಂದ್ರ ಸಮಿತಿ ಟ್ರಸ್ಟಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಪುತ್ತೂರು ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.

ವಿಚಾರಗೋಷ್ಠಿ
ಪತ್ತೂರು ನಿಧಿ ಪ್ರಾಡಿಕ್ಸ್ ‘ನಿತ್ಯ’ ಚಪಾತಿ, ಮುಕ್ಷೆ ಇದರ ಮಾಲಕರಾದ ರಾಧಾಕೃಷ್ಣ ಇಟ್ಟಿಗುಂಡಿ ರವರು ದಿನ ನಿತ್ಯದ ಆಹಾರದಲ್ಲಿ ಸಿರಿಧಾನ್ಯಗಳ ಬಳಕೆ ಮತ್ತು ಮಹತ್ವಗಳ ಬಗ್ಗೆ ವಿಚಾರಗೋಷ್ಠಿ ನಡಸಿಕೊಟ್ಟರು.

ಕುಂಬ್ರ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ರವರು ಸಹಕಾರ ಸಂಘಗಳಿಂದ ದೊರಕುವ ಸೌಲಭ್ಯ ಮತ್ತು ವಿಮಾ ಯೋಜನೆಗಳ ಮಾಹಿತಿ ನೀಡಿದರು. ಡಾ.ನಿವೇದಿತಾ ಸಾವಯವ ಕೃಷಿಯ ಮಾಹಿತಿ ನೀಡಿದರು. ಕೇಂದ್ರ ಸಮಿತಿ ಟ್ರಸ್ಟಿ  ಜಯರಾಮ ಪೂಜಾರಿ ಬಂಟ್ವಾಳ ಐತಿಹಾಸಿಕ ಪಡುಮಲೆ ಕಥಾನಕ ಬಗ್ಗೆ ಮಾಹಿತಿ ನೀಡಿದರು. ವಿಚಾರಗೋಷ್ಠಿ ಕಾರ್ಯಕ್ರಮವನ್ನು ಕೇಂದ್ರ ಸಮಿತಿ ಟ್ರಸ್ಟಿ ದುಗಪ್ಪ ಎನ್ ಪುತ್ತೂರು ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ:
ಅಪರಾಹ್ನ  ಗಂ 2.30 ರಿಂದ ಹಿರಿಯರ ಸೇವಾ ಪ್ರತಿಷ್ಠಾನದ ಸದಸ್ಯರಿಂದ ‘ಶ್ರೀ ರಾಮದರ್ಶನ’  ಯಕ್ಷಗಾನ ತಾಳಮದ್ದಳೆ ನಡೆಯಿತು.

ಗೌರವಾರ್ಪಣೆ:
ಪುತ್ತೂರು ಬೀರಮಲೆಬೆಟ್ಟ ಪ್ರಜ್ಞಾ ಆಶ್ರಮದ ವಿಕಲಚೇತನ ಮಕ್ಕಳನ್ನು ಉತ್ತಮ ರೀತಿಯಲ್ಲಿ ಹಾರೖೆಕೆ ಮಾಡುತ್ತಿರುವ ಜ್ಯೋತಿ  ಹಾಗೂ ಪಟ್ಟೆ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಗುರುಗಳು ಹಾಗೂ ಶ್ರೀ ಕ್ಷೇತ್ರ ಪಡುಮಲೆ, ವ್ಯವಸ್ಥಾಪನಾ ಸಮಿತಿ, ಸದಸ್ಯರು ಆಗಿರುವ ಶಂಕರಿ ಕೆ. ಇವರುಗಳನ್ನು  ಸಾಲು ಹೊದಿಸಿ, ಹಾರ ಫಲಪುಷ್ಪ ಸನ್ಮಾನ ಪತ್ರ ನೀಡಿ ಅಭಿನಂದಿಸಲಾಯಿತು.

ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಗಿರಿಮನೆ ಸ್ವಾಗತಿಸಿದರು. ಲೋಕೇಶ್ ಹಗ್ಡೆ ಪುತ್ತೂರು ಸನ್ಮಾನ ಪತ್ರ ವಾಚಿಸಿದರು. ಸಂಚಾಲಕ ಬಾಸ್ಕರ ಬಾರ್ಯ ವಂದಿಸಿದರು. ಮೆಲ್ಕಾರ್  ಅಖಿಲ ಕರ್ನಾಟಕ ಹಿರಿಯ ಸೇವಾ ಪ್ರತಿಷ್ಠಾನ (ರಿ.) ನ  ಪ್ರಾಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ  ಕಾರ್ಯಕ್ರಮ ನಿರೂಪಿಸಿದರು, 

LEAVE A REPLY

Please enter your comment!
Please enter your name here