ಮದುವೆಯಾಗುವುದಾಗಿ ವಂಚನೆ : ಆರೋಪಿಯ ತಂದೆಯನ್ನು ದೇವಸ್ಥಾನದಿಂದ ವಜಾಗೊಳಿಸುವಂತೆ ವಿಶ್ವಕರ್ಮ ಯುವ ಮಿಲನ್ ನಿಯೋಗ ಮನವಿ

0


ಪುತ್ತೂರು: ಮದುವೆಯಾಗುವುದಾಗಿ ನಂಬಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ತಂದೆಯನ್ನು ದೇವಸ್ಥಾನದಿಂದ ವಜಾಗೊಳಿಸುವಂತೆ ವಿಶ್ವಕರ್ಮ ಯುವ ಮಿಲನ್ ನಿಯೋಗ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಶಾರದಾ ಭಜನಾ ಮಂದಿರಕ್ಕೆ ಮನವಿ ನೀಡಲಾಗಿದೆ.


ಪ್ರಕರಣದ ಆರೋಪಿ ಶ್ರೀಕೃಷ್ಣಾ ಜೆ. ರಾವ್ ಅವರ ತಂದೆ ಪಿ.ಜಿ. ಜಗನ್ನಿವಾಸ ರಾವ್ ಅವರು ಪಿ.ಜಿ. ಜಗನ್ನಿವಾಸ ರಾವ್ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ತನ್ನ ಮಗನೊಂದಿಗೆ ಮದುವೆ ಮಾಡಿಸುವುದಾಗಿ ನೀಡಿದ ಒಪ್ಪಿಗೆ ಪತ್ರ ನೀಡಿ ಬಳಿಕ ನನ್ನ ಮಗನ ಆರೋಪ ಸಾಬೀತಾಗಿಲ್ಲ ಹಿಂದಕ್ಕೆ ಸರಿದು ವಚನಭ್ರಷ್ಟರಾಗಿದ್ದಾರೆ. ಇದಲ್ಲದೆ ಅವರು ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಇರುವುದು ಅವರ ಮಗನ ಕೃತ್ಯಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ದೇವಸ್ಥಾನದ ಹೆಸರಿಗೆ ಕುಂದುಂಟು ಮಾಡುವ ಯಾವುದೇ ವ್ಯಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ಹೊರಗಿರಿಸಿಕೊಳ್ಳವುದು ಆಡಳಿತದ ಘನತೆಯಾಗಿದೆ. ಹಿಂದೆ ಬ್ರಹ್ಮವಾಹಕರಿಂದ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆಯಾದಾಗ ಅಂದಿನ ಅಧ್ಯಕ್ಷರು ತಕ್ಷಣ ಅವರನ್ನು ವಜಾಗೊಳಿಸಿದ್ದ ಕ್ರಮವನ್ನು ಇಲ್ಲಿ ನಾವು ಶ್ಲಾಘಿಸುತ್ತೇವೆ. ಹಾಗಾಗಿ ಪಿ.ಜಿ.ಜಗನ್ನಿವಾಸ ರಾವ್ ಅವರನ್ನೂ ಕೂಡಾ ವಜಾಗೊಳಿಸಬೇಕು ಎಂದು ಮನವಿಯನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರಿಗೆ ನೀಡಿದ್ದಾರೆ. ಇದರ ಜೊತೆಗೆ ಶಾರದಾ ಭಜನಾ ಮಂದಿರದಿಂದಲೂ ಅವರನ್ನು ವಜಾಗೊಳಿಸುವಂತೆ ಮಂದಿರದ ಪ್ರಧಾನ ಕಾರ್ಯದರ್ಶಿಯವರಿಗೆ ಮನವ ನೀಡಲಾಗಿದೆ.

ನಿಯೋಗದಲ್ಲಿ ವಿಶ್ವಕರ್ಮ ಯುವಮಿಲನ್‌ನ ಅಧ್ಯಕ್ಷ ರಾಜ್ಯ ಸಮಿತಿ ಸದಸ್ಯ ಸುಬ್ರಹ್ಮಣ್ಯ ಆಚಾರ್ಯ, ತಾಲೂಕು ಅಧ್ಯಕ್ಷ ಹರೀಶ್ ಆಚಾರ್ಯ ಕೆಮ್ಮಾಯಿ, ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಪಾಲ್ತಾಡಿ, ಕೋಶಧಿಕಾರಿ ಜಗದೀಶ ಆಚಾರ್ಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here