ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಹಾಗೂ ಪುತ್ತೂರಿನ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಸಹಯೋಗದಲ್ಲಿ ಆಗಸ್ಟ್ 19 ರಂದು ಸಾಮೆತ್ತಡ್ಕದಲ್ಲಿರುವ ಸುದಾನ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಪುತ್ತೂರು ನಗರ ವಲಯ ಮಟ್ಟದ 14 ರ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಶಟಲ್ ಬ್ಯಾಂಡ್ಮಿಟನ್ ಪಂದ್ಯಾಟದಲ್ಲಿ ಅನೀಶ್ ಎಂ ಎಚ್, ಸ್ಕಂದ ಭಟ್, ಮಹಮ್ಮದ್ ಅಜಮಲ್, ಶಿಟಿಜ಼್, ಮಯಾಂಕ್, ಹೃತ್ವಿಕಾ ಆರ್ ನಾಕ್, ಇಂಪನ ಸಿ ಭಟ್, ಫಾತಿಮ ಇಝ ಜುಬೈದಾ ಅವರು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹಾಗೆಯೇ 17 ರ ವಯೋಮಿತಿಯ ಪ್ರೌಢ ಶಾಲಾ ಬಾಲಕಿಯರ ವಿಭಾಗದಲ್ಲಿ ಸಾನ್ವಿ ರಾಧಾ ಎಸ್, ಯಶ್ವಿ ಜೆ ಶೆಟ್ಟಿ, ಮಾನ್ವಿ. ಡಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರನ್ನು ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್, ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಅಭಿನಂದಿಸಿ, ಶುಭಹಾರೈಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವರುಣ್ ತರಬೇತಿ ಮತ್ತು ಮಾರ್ಗದರ್ಶನ ನೀಡಿರುತ್ತಾರೆ.