ಪುತ್ತೂರು : ಇನ್ನರ್ ವೀಲ್ ಸಂಸ್ಥೆಯಿಂದ ಕೊಂಬೆಟ್ಟು ಶಾಲೆಯಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಆ.21ರಂದು ಮಾದಕ ವ್ಯಸನ ಅರಿವು ಕಾರ್ಯಕ್ರಮ ನಡೆಯಿತು.
ಪುತ್ತೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಉತ್ತಮ ನಾಗರಿಕರಾಗಿ ಎಂದರು. ಅಧ್ಯಕ್ಷೆ ರೂಪಲೇಖ ಪ್ರೇರಣೆ ಹೊಂದಿರುವಂತಹ ಮಾತುಗಳನ್ನಾಡಿದರು. ಇನ್ನರ್ ವೀಲ್ ಸಂಸ್ಥೆ ಯ ವತಿಯಿಂದ ಡ್ರಗ್ ಅವೇರ್ನೆಸಿನ ಫಲಕವನ್ನು ಕೊಂಬೆಟ್ಟು ಶಾಲೆಗೆ ಸಮರ್ಪಿಸಲಾಯಿತು.ಉಪನ್ಯಾಸಕ ಸುಬ್ರಹ್ಮಣ್ಯ ಸ್ವಾಗತಿಸಿದರು, ಸಂಧ್ಯಾಸಾಯ ವಂದಿಸಿದರು.

ಇನ್ನರ್ ವೀಲ್ ಸಂಸ್ಥೆಯ ಸದಸ್ಯರಾದ ವೇದ ಲಕ್ಷ್ಮಿಕಾಂತ್ ,ಶಂಕರಿ ಎಂ ಎಸ್ ಭಟ್, ನಿರ್ಮಲ ಬಿ ಕೆ,ವತ್ಸಲ ಶೆಟ್ಟಿ ಮತ್ತು ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.