ಕಡಬ ಪೊಲೀಸ್ ಠಾಣಾಧಿಕಾರಿ ಅಭಿನಂದನ್ ಭೇಟಿ- ಶ್ಲಾಘನೆ ವ್ಯಕ್ತಪಡಿಸಿದ ಎಸ್.ಐ
ಕಾಣಿಯೂರು: ಭೀಕರ ಬಿರುಗಾಳಿಗೆ ದೋಳ್ಪಾಡಿ ಗ್ರಾಮದ ರಾಮಕೃಷ್ಣ ಬೋಳ ಎಂಬವರ 1500 ಅಡಕೆ ಮರ ಧರಾಶಾಹಿಯಾಗಿ ಅಪಾರ ನಷ್ಟ ಸಂಭವಿಸಿದೆ. ಈ ಪೈಕಿ ಭೀಕರ ಬಿರುಗಾಳಿಗೆ ವಾಲಿಕೊಂಡಿದ್ದ ಅಡಕೆ ಮರಗಳನ್ನು ಹಗ್ಗದ ಮೂಲಕ ನಿಲ್ಲಿಸುವ ಕಾರ್ಯವನ್ನು ಸುಳ್ಯ ತಾಲೂಕು ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರು, ವಿಷ್ಣು ಗ್ರೂಪ್ಸ್ ಮರುವಂಜ ಇದರ ಮಾಲಕರಾದ
ಪ್ರಶಾಂತ್ ರೈ ಮರುವಂಜ ಇವರ ನೇತೃತ್ವದಲ್ಲಿ ಮಾಡಿದ್ದು ಶ್ಲಾಘನೀಯ ವ್ಯಕ್ತವಾಗಿದೆ.

ಆ 19ರ ಮುಂಜಾವಿನ ವೇಳೆಗೆ ಸವಣೂರು ಗ್ರಾಮದ ಇಡ್ಯಾಡಿ ಭಾಗದಿಂದ ಕುಮಾಧಾರ ನದಿ ತಟದಿಂದ ಬುಗಿಲೆದ್ದ ಬಿರುಗಾಳಿ ಸುಮಾರು ಹತ್ತು ಕಿಲೋ ಮೀಟರ್ ದೂರದವರೆಗೆ ಎಡಮಂಗಲ ತನಕ ಅಬ್ಬರಿಸಿ ಸಾವಿರಾರು ಸಂಖ್ಯೆಯಲ್ಲಿ ಅಡಿಕೆ ಮರಗಳು, ತೆಂಗಿನಮರ ಗಳು ಅಲ್ಲದೇ ವಿದ್ಯುತ್ ಕಂಬಗಳು ರಬ್ಬರ್ ಮರಗಳು, ಬಾಳೆ, ತೆಂಗು ತೋಟಗಳು ಬಾರೀ ಗಾತ್ರದ ಮರಗಳು ಬಿರುಗಾಳಿಯ ಅಟ್ಟಹಾಸಕ್ಕೆ ಧರಾಶಾಯಿಯಾಗಿವೆ. ಸುಮಾರು 100ಕ್ಕೂ ಹೆಚ್ಚು ವಿದ್ಯತ್ ಕಂಬಗಳು ಮುರಿದು ಬಿದ್ದಿವೆ. 50ಕ್ಕೂ ಹೆಚ್ಚು ಮನೆಗಳಿಗೆ ಮರ ಬಿದ್ದು ಹಾನಿಯಾಗಿ ಅಪಾರ ಪ್ರಮಾಣದ ನಷ್ಟ ಉಂಟು ಮಾಡಿತ್ತು. ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೋಳ್ಪಾಡಿ ಗ್ರಾಮದ ರಾಮಕೃಷ್ಣ ಬೋಳ ಎಂಬವರಿಗೆ ಸೇರಿದ 1500 ಅಡಕೆ ಮರಗಳು ಸಂಪೂರ್ಣ ನಾಶವಾಗಿತ್ತು. ಸುಮಾರು 20ಕ್ಕೂ ಮಿಕ್ಕಿ ತೆಂಗಿನ ಮರಗಳು ಮುರಿದು ಹಾನಿ ಉಂಟಾಗಿ ಅಪಾರ ನಷ್ಟ ಸಂಭವಿಸಿತು.
ಕಡಬ ಎಸ್.ಐ ಅಭಿನಂದನ್ ಭೇಟಿ
ದೋಳ್ಪಾಡಿಯಲ್ಲಿ ಬಿರುಗಾಳಿಗೆ ಹಾನಿಗೊಂಡ ಪ್ರದೇಶಕ್ಕೆ ಭೇಟಿ ನೀಡಿದ ಕಡಬ ಪೊಲೀಸ್ ಠಾಣಾಧಿಕಾರಿ ಅಭಿನಂದನ್ ಅವರು ವಿಷ್ಣು ಗ್ರೂಪ್ಸ್ ಮಾರುವಂಜ ತಂಡಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.