ಉಪ್ಪಿನಂಗಡಿ: ಹಗಲಿನಲ್ಲಿ ಸೂರ್ಯನ ತಾಪಕ್ಕೆ ಕಾದಿದ್ದ ಭೂಮಿಗೆ ಪುತ್ತೂರು, ಉಪ್ಪಿನಂಗಡಿ ಸಹಿತ ತಾಲೂಕಿನ ವಿವಿಧ ಕಡೆ ನ.22ರ ರಾತ್ರಿ ವರುಣನ ಆಗಮನವು ತಂಪಿನ ಸ್ಪರ್ಶ ನೀಡಿತು.
ರಾತ್ರಿ ಸುಮಾರು 8:45ಕ್ಕೆ ಗುಡುಗು ಸಹಿತ ಈ ಭಾಗದಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಉತ್ತಮ ಮಳೆಯಾಗಿದೆ.
ಉಪ್ಪಿನಂಗಡಿಯಲ್ಲಿ ಅರ್ಧ ಗಂಟೆ ಬಿಡುವಿನ ಬಳಿಕ ಮತ್ತೆ ಸುರಿಯಲಾರಂಭಿಸಿ ರಾತ್ರಿ 10.45ರ ತನಕವೂ ಮುಂದುವರಿದಿತ್ತು. ಶುಭ ಕಾರ್ಯಗಳನ್ನು ನಡೆಸಲು ಈಗ ಉತ್ತಮ ದಿನವಾಗಿದ್ದು, ನಿರೀಕ್ಷಿಸದೇ ಬಂದ ಮಳೆಯಿಂದಾಗಿ ಶುಭ ಕಾರ್ಯಗಳಿದ್ದ ಕೆಲವು ಮನೆಗಳಲ್ಲಿ ಅಸ್ತವ್ಯಸ್ತಕ್ಕೂ ಕಾರಣವಾಯಿತು.
