ಪುತ್ತೂರು: ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ ಮತ್ತು ಶ್ರೀ ಗೌರಿ ಮಹಿಳಾ ಮಂಡಲ ಸರ್ವೆ ವತಿಯಿಂದ ಭಕ್ತಕೋಡಿ ಶ್ರೀ ರಾಮ ಭಜನಾ ಮಂದಿರದ ಆವರಣದಲ್ಲಿ ನಡೆದ 24ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಭಾ ಕಾರ್ಯಕ್ರಮವು ಆ.15ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಬಿ.ಕೆ. ಜನಾರ್ದನ ಗೌಡ ಭಕ್ತಕೋಡಿ ಯುವಕ ಮಂಡಲದ ಯುವಕರು ಸಮಾಜದ ಏಳಿಗೆಯ ಉತ್ತಮ ಉದ್ದೇಶಗಳಿಗಾಗಿ ಸಂಘಟಿತರಾಗಿ ದುಡಿಯುತ್ತಿದ್ದಾರೆ. ಶ್ರೀ ರಾಮ ಭಜನಾ ಮಂದಿರದ ಅಭಿವೃದ್ಧಿಗಾಗಿ ದುಡಿದಿದ್ದಾರೆ ಎಂದು ಹೇಳಿದರು.

ರಾಜ್ಯ ಯುವ ಸಂಘಗಳ ಪ್ರಧಾನ ಕಾರ್ಯದರ್ಶಿಯಾಗಿರುವ ಸುರೇಶ್ ರೈ ಸೂಡಿಮುಳ್ಳು ಮಾತನಾಡಿ, ಯುವಕ ಮಂಡಲಗಳನ್ನು ಇಲಾಖೆಯ ನಿಯಮಗಳ ಇತಿಮಿತಿಯಲ್ಲಿ ಸಂಘಟಿಸುವುದು ಸುಲಭದ ಮಾತಲ್ಲ. ಷಣ್ಮುಖ ಯುವಕ ಮಂಡಲ ರಾಜಕೀಯ ರಹಿತವಾಗಿ ಎಲ್ಲ ಜಾತಿ, ಧರ್ಮ, ವರ್ಗಗಳನ್ನು ಒಟ್ಟುಗೂಡಿಸಿಕೊಂಡು ಬೆಳೆದು ಬಂದಿದೆ ಎಂದರು.
ಯುವಕ ಮಂಡಲದ ಗೌರವ ಸಲಹೆಗಾರರಾಗಿರುವ ಶ್ರೀನಿವಾಸ್ ಹೆಚ್.ಬಿ. ಮಾತನಾಡಿ, ಶೈಕ್ಷಣಿಕ ವಾಗಿ, ಸಾಮಾಜಿಕವಾಗಿ, ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ. ಯುವಕ ಮಂಡಲಕ್ಕೆ 25 ವರ್ಷಗಳು ತುಂಬುತ್ತಿರುವ ಸಂಧರ್ಭ ದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದರು. ಯುವಕ ಮಂಡಲದ ಗೌರವ ಸಲಹೆಗಾರರಾಗಿರುವ ಶಶಿಧರ್ ಎಸ್.ಡಿ. ಮಾತನಾಡಿ ಯುವಕ ಮಂಡಲದ ಸದಸ್ಯರು ಸರ್ವೆ ಗ್ರಾಮದ ಬೇರೆ ಬೇರೆ ಸಂಘ ಸಂಸ್ಥೆ ಗಳ ಪದಾಧಿಕಾರಿಗಳಾಗಿ ಉತ್ತಮ ವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ ಯುವಕ ಮಂಡಲ ಗೌರವ ಸಲಹೆಗಾರರಾಗಿರುವ ಜಿ.ಕೆ ಪ್ರಸನ್ನ ಇವರು ಮಾತನಾಡಿ, ಯುವಕ ಮಂಡಲ ತನ್ನ ಸಾಮಾಜಿಕ ಸೇವೆಗಾಗಿ ಅನೇಕ ಪ್ರಶಸ್ತಿ ಗಳನ್ನು ಪಡೆದಿದೆ. ಅಷ್ಟಮಿ ಕಾರ್ಯಕ್ರಮ ಗ್ರಾಮಸ್ಥರನ್ನು ಒಗ್ಗೂಡಿಸುವ ಕೆಲಸ ಮಾಡಿದೆ. ನಾವೆಲ್ಲರೂ ಯುವಕ ಮಂಡಲದ ಜೊತೆಗಿದ್ದುಗೊಂಡು ಕೆಲಸ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು.
ಯುವಕ ಮಂಡಲದ ಗೌರವ ಸಲಹೆಗಾರರಾದ ಡಾ.ಸೀತಾರಾಮ್ ಭಟ್ ಕಲ್ಲಮ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಶ್ರೀ ಗೌರಿ ಮಹಿಳಾ ಮಂಡಲದ ಅಧ್ಯಕ್ಷೆ ಕುಶಲಾ ನಾಗೇಶ್ ಪಟ್ಟೆಮಜಲು ಅವರು ಯುವಕ ಮಂಡಲ ಹಾಗೂ ಗೌರಿ ಮಹಿಳಾ ಮಂಡಲದ ಕಾರ್ಯಕ್ರಮಗಳ ಮಾಹಿತಿ ನೀಡಿ ವಂದಿಸಿದರು. ಜಯರಾಜ್ ಸುವರ್ಣ ಸೊರಕೆ ಪ್ರಾರ್ಥಿಸಿದರು. ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಗೌತಮ್ ಪಟ್ಟೆಮಜಲು ಅತಿಥಿಗಳನ್ನು ಶಾಲು ಹೊದಿಸಿ ಗೌರವಿಸಿದರು. ಎಸ್.ಎಂ. ಶರೀಫ್ ಸರ್ವೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ಭಕ್ತಕೋಡಿ ಅಂಗನವಾಡಿ ಕೇಂದ್ರದ ವಠಾರದಿಂದ ಭಕ್ತಕೋಡಿ ಶ್ರೀ ರಾಮ ಭಜನಾ ಮಂದಿರದ ವಠಾರದವರೆಗೆ ಶ್ರೀ ಕೃಷ್ಣ ಹಾಗೂ ರಾಧೆಯ ವೇಷಧಾರಿ ಮಕ್ಕಳ ಜೊತೆ ಚೆಂಡೆ ವಾದನದ ಮೆರವಣಿಗೆ ನಡೆಯಿತು.
ಆಟೋಟ ಸ್ಪರ್ಧೆ: ಮೊಸರು ಕುಡಿಕೆ ಅಂಗವಾಗಿ ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಯುವಕ ಮಂಡಲದ ಮಾಜಿ ಅಧ್ಯಕ್ಷರು ಸುಬ್ರಹ್ಮಣ್ಯ ಕರುಂಬಾರು ಕಾರ್ಯಕ್ರಮ ಸಂಯೋಜಿಸಿದರು.
ಕೃಷ್ಣಂ ವಂದೇ ಜಗದ್ಗುರುಂ ಯಕ್ಷಗಾನ:
ಶ್ರವಣರಂಗ ಪ್ರತಿಷ್ಠಾನ ಸವಣೂರು ಸಾದರಪಡಿಸುವ. ತಾರನಾಥ ಸವಣೂರು ನಿರ್ದೇಶನದಲ್ಲಿ ಪಿ.ಎಂ. ಶ್ರೀ ಸ.ಹಿ.ಪ್ರಾ.ಶಾಲೆ ವೀರಮಂಗಿಲ ಇಲ್ಲಿನ ಬಾಲ ಕಲಾವಿದರಿಂದ ಯಕ್ಷಗಾನ ಬಯಲಾಟ ‘ ಕೃಷ್ಣಂ ವಂದೇ ಜಗದ್ಗುರುಂ’ ನಡೆಯಿತು.
ವಿಶಿಷ್ಟ ಚೇತನ ಕು. ರಕ್ಷಾಳಿಗೆ ಸನ್ಮಾನ :
ನಿರಂತರವಾಗಿ ಅಷ್ಟಮಿ ಕಾರ್ಯಕ್ರಮದಲ್ಲಿ ನಡೆಯುವ ಸ್ಪರ್ಧೆ ಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಪ್ರತಿಭಾನ್ವಿತೆ ಸರಸ್ವತಿ ವಿದ್ಯಾಮಂದಿರದ ವಿದ್ಯಾರ್ಥಿನಿ ಚಂದ್ರಶೇಖರ ಭಟ್ ಕಲ್ಲಮ ಮತ್ತು ಪ್ರೇಮಲತಾ ದಂಪತಿಗಳ ಪುತ್ರಿ ವಿಶೇಷ ಚೇತನ ಕು ರಕ್ಷಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಯುವಕ ಮಂಡಲದ ಅಧ್ಯಕ್ಷ ಗೌತಮ್ ರಾಜ್ ಕರುಂಬಾರು
ಪ್ರಾಸ್ತಾವಿಕವಾಗಿ ಮಾತನಾಡಿ ಯುವಕ ಮಂಡಲದ ಅಷ್ಟಮಿ ಕಾರ್ಯಕ್ರಮದ ಆಯೋಜನೆ ಗೆ ಗ್ರಾಮಸ್ಥರ ಅಭೂತ ಪೂರ್ವ ತನು ಮನ ಧನದ ಬೆಂಬಲವಿದ್ದು, ಅದಕ್ಕೆ ಅಭಾರಿಗಳಾಗಿದ್ದೇವೆ. ಸಂಗ್ರಹಿಸಿದ ಹಣವನ್ನು ಮತ್ತೆ ಶೈಕ್ಷಣಿಕ, ಸಾಮಾಜಿಕ ಕೆಲಸಗಳಿಗೆ ಖರ್ಚು ಮಾಡುತ್ತೇವೆ. ಪ್ರತಿ ವರ್ಷದ ಕೆಲಸಗಳ ವರದಿಯನ್ನು ಆಮಂತ್ರಣ ಪತ್ರದಲ್ಲಿ ನೀಡುತ್ತೇವೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮುಂಡೂರು, ಹಾಗೂ ಮುಂಡೂರು ಪಂಚಾಯತ್ ಸಹಕಾರ ನೀಡುತ್ತಿದ್ದಾರೆ. ಯುವಕ ಮಂಡಲಕ್ಕೆ 25 ನೆಯ ವರ್ಷ ತುಂಬುತ್ತಿರುವ ಸಂಧರ್ಭದಲ್ಲಿ ಸರಣಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಿದ್ದೇವೆ. ಯುವಕ ಮಂಡಲದ ಸದಸ್ಯರ ಪರಿಶ್ರಮ ದಿಂದ ಯುವಕ ಮಂಡಲ ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ ಎಂದರು.