ಕುಂಬ್ರ: ಶೇಖಮಲೆಯಲ್ಲಿ ಒಮ್ನಿ ಪಲ್ಟಿ-ಅಪಾಯದಿಂದ ಪಾರು

0

ಪುತ್ತೂರು: ಒಮ್ನಿ ಕಾರೊಂದು ಪಲ್ಟಿಯಾಗಿದ್ದು, ಚಾಲಕ ಅಪಾಯದಿಂದ ಪಾರಾದ ಘಟನೆ ಕುಂಬ್ರದ ಶೇಖಮಲೆ ಎಂಬಲ್ಲಿ ನಡೆದಿದೆ.

ಪುತ್ತೂರಿನಿಂದ ಸುಳ್ಯ ಕಡೆಗೆ ಹೋಗುತ್ತಿದ್ದ (ಕೆ ಎ 21 ಎಂ 2989)ನಂಬರಿನ ಒಮ್ನಿ ಕಾರೊಂದು ಕುಂಬ್ರದ ಶೇಖಮಲೆ ಫರ್ನಿಚರ್‌ ಅಂಗಡಿ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಅಪಘಾತದಿಂದ ಕಾರು ನಜ್ಜುಗುಜ್ಜಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here