ಬಡಗನ್ನೂರು ಕೊಯಿಲದಲ್ಲಿ ಸ್ವತಂತ್ರ ಸಂಜೆ  ಸೌಹಾರ್ದ ಚಹಾಕೂಟ- ಎಸ್. ವೈ ಎಸ್ ಕೊಯಿಲ ಯುನಿಟ್ ಇದರ ವತಿಯಿಂದ ಪವರ್ ಮ್ಯಾನ್ ಗಳಿಗೆ ಗೌರವಾರ್ಪಣಾ

0

ಬಡಗನ್ನೂರು: ನಿನ್ನೆಗಳ ನೆನಪು ಮತ್ತು ನಾಳಿನ ನಿರಿಕ್ಷೆ ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್ ವೈ ಎಸ್ ಕೊಯಿಲ ಯುನಿಟ್ ಇದರ ವತಿಯಿಂದ ಸ್ವತಂತ್ರ ಸಂಜೆ, ಸೌಹಾರ್ದ ಚಹಾಕೂಟ ಹಾಗೂ ಪವರ್ ಮ್ಯಾನ್ ಗಳಿಗೆ ಗೌರವಾರ್ಪಣಾ ಸಮಾರಂಭವು ಇತ್ತೀಚಿಗೆ ಕೊಯಿಲ ಸುನ್ನೀ ಸೆಂಟರ್ ಮಸ್ಜಿದ್ ನಲ್ಲಿ ನಡೆಯಿತು.

ಎಸ್. ವೈ ಎಸ್ ರಾಜ್ಯ ನಾಯಕ ಹಮೀದ್ ಕೊಯಿಲ ಸ್ವಾಗತಿಸಿ, ಕಾರ್ಯಕ್ರಮದ ಉದ್ದೇಶ ಹಾಗೂ ಪ್ರಸ್ತುತ ಸನ್ನಿವೇಶದಲ್ಲಿ ಇಂತಹ ಕಾರ್ಯಕ್ರಮದ ಮಹತ್ವದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ಪಾಟಾಳಿ ಬಡಕ್ಕಾಯೂರು ಮಾತನಾಡಿ, ಇಂದಿನ ದಿನಗಳಲ್ಲಿ ಎಲ್ಲರೂ ವಿದ್ಯುತ್ ಸಮಸ್ಯೆಯಾದಾಗ ಪವರ್ ಮ್ಯಾನ್ ಗಳಿಗೆ ಹಿಡಿಶಾಪ ಹಾಕುವವರೇ ಹೊರತು ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡುವವರು ಬಹಳ ವಿರಳ. ಆದರೆ ಇಂದು ಎಸ್. ವೈಎಸ್ ಸಂಘಟನೆ ರವರು ಪವರ್ ಮ್ಯಾನ್ ರವರನ್ನು ಗುರುತಿಸಿ ಗೌರವಿಸುತ್ತಾರುವುದು ಶ್ಲಾಘನಿಯ ಕೆಲಸ. ಅದೇ ರೀತಿ ಸರ್ವಧರ್ಮದ ವರನ್ನು ಸೇರಿಸಿ ಆಯೋಜಿಸುವ ಇಂತಹ ಕಾರ್ಯಕ್ರಮಗಳು ಸೌರ್ಹಾರ್ದತೆಗೆ ಪೂರಕ ಎಂದು ಹೇಳಿದರು.

ಯುವ ನಾಯಕ ಪ್ರಕಾಶ್ ರೈ ಕೊಯಿಲ, ಸ್ಥಳೀಯ ಖತೀಬರಾದ ಮನ್ಸೂರ್ ಅದನಿ ಉಸ್ತಾದ್, ಎಸ್ ಎಸ್. ಎಸ್. ಎಫ್ ಈಶ್ವರಮಂಗಲ ಸೆಕ್ಟರ್ ಅಧ್ಯಕ್ಷ ಸಿ ಎಂ. ಅಬೂಬಕ್ಕರ್ ಸಿದ್ದೀಕ್ ಹಾಶಿಮಿ, ಜಮಾಅತ್ ಪ್ರಧಾನ ಕಾರ್ಯದರ್ಶಿ ಸಿ.ಕೆ ಅಹ್ಮದ್ ನಈಮಿ ಸಂದರ್ಭೋಚಿತವಾಗಿ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಬಡಗನ್ನೂರು ಗ್ರಾಮ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಖ್ವಾಜಾ ಬಂದೇ ನವಾಜ್, ಸಿದ್ದರಾಮೇಶ ಹಾಗೂ ಹನುಮಂತಪ್ಪ ಇವರನ್ನು ಸನ್ಮಾನಿಸಲಾಯಿತು. 

ನಂತರ ನಡೆದ ಚಹಾಕೂಟದಲ್ಲಿ ನಮ್ಮೂರಿನಲ್ಲಿ ಈ ಹಿಂದೆ ಇದ್ದಂತಹ ಚಹಾದ ಅಂಗಡಿಯ ಸವಿನೆನಪುಗಳನ್ನು ಮೆಲುಕು ಹಾಕುತ್ತಾ ಮುಂದಿನ ದಿನಗಳಲ್ಲಿ ಊರಿನ ಎಲ್ಲಾ ಜನರನ್ನು ಸೇರಿಸಿಕೊಂಡು ಒಂದು ಬೃಹತ್ ಸೌಹಾರ್ದ ಕಾರ್ಯಕ್ರಮ ನಡೆಸುವ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ನಮ್ಮೂರಿನ ಪ್ರಮುಖ ನೇತಾರರು ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್. ವೈ .ಎಸ್ , ಎಸ್. ಎಸ್. ಎಫ್ ನ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here