ರಾಮಕುಂಜ : ಶ್ರೀರಾಮಕುಂಜೇಶ್ವರ ಪ್ರೌಢಶಾಲೆಯಲ್ಲಿ ರೋಬೋಟಿಕ್ಸ್ ಕುರಿತಾದ ಮಾಹಿತಿ ಕಾರ್ಯಗಾರವು ಶಾಲಾ ಸಭಾಂಗಣದಲ್ಲಿ ನಡೆಯಿತು.
ಅಟಲ್ ಟಿಂಕರಿಂಗ್ ಲ್ಯಾಬ್ ವತಿಯಿಂದ ಶಾಲೆಯಲ್ಲಿ ರೋಬೋಟಿಕ್ಸ್ ತರಗತಿಗಳು ನಡೆಯುತ್ತಿದ್ದು, ಕೆನರಾ ಇಂಜಿನಿಯರಿಂಗ್ ಕಾಲೇಜು ಬೆಂಜನ ಪದವು ಇಲ್ಲಿಯ 15 ವಿದ್ಯಾರ್ಥಿಗಳ ತಂಡ ಮತ್ತು ಉಪನ್ಯಾಸಕರು ಶಾಲಾ ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್ ಕುರಿತಾದ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳಲ್ಲಿ ವಿವಿಧ ರೀತಿಯ ಸೆನ್ಸರ್ ಸಹಿತ ಮಾದರಿಗಳನ್ನು ಮಾಡಿಸಿದರು. ಶಾಲಾ ವಿದ್ಯಾರ್ಥಿಗಳು ಬಹಳ ಆಸಕ್ತಿಯಿಂದ ಇದರ ಕುರಿತಾದ ಮಾಹಿತಿಯನ್ನು ಪಡೆದುಕೊಂಡರು.
ವಿಜ್ಞಾನ ಶಿಕ್ಷಕಿ ಮಧುರ ಇದರ ನೇತೃತ್ವ ವಹಿಸಿದ್ದರು. ಶಾಲಾ ಮುಖ್ಯಗುರು ಸತೀಶ್ ಭಟ್ ಮಾರ್ಗದರ್ಶನ ನೀಡಿದರು.