ಆ.25: ರೋಟರಿ ಪುತ್ತೂರು, ಕೆ.ವಿ.ಜಿ ದಂತ ಮಹಾವಿದ್ಯಾಲಯ ಆಸ್ಪತ್ರೆಯಿಂದ ರೋಟರಿ ಮಲ್ಟಿ ಸ್ಪೆಷಾಲಿಟಿ ಸ್ಯಾಟಲೈಟ್ ಡೆಂಟಲ್ ಕ್ಲಿನಿಕ್ ಶುಭಾರಂಭ

0

ಪುತ್ತೂರು: ಜಿಲ್ಲೆಯ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರು, ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಕುರುಂಜಿಭಾಗ್, ಸುಳ್ಯ ಮತ್ತು ಪುತ್ತೂರು ಪಾಲಿಕ್ಲಿನಿಕ್, ಪುತ್ತೂರು ಇವುಗಳ ಸಹಭಾಗಿತ್ವದಲ್ಲಿ ಸುಳ್ಯ ಕುರುಂಜಿಭಾಗ್ ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇದರ ನಿರ್ವಹಣೆಯೊಂದಿಗೆ ಪುತ್ತೂರು ರೋಟರಿ ಮಲ್ಟಿ ಸ್ಪೆಷಾಲಿಟಿ ಸ್ಯಾಟಲೈಟ್ ಡೆಂಟಲ್ ಕ್ಲಿನಿಕ್ ಆ.25 ರಂದು ಬೊಳ್ವಾರು ಮಹಾವೀರ ವೆಂಚರ್ ನ ಪುತ್ತೂರು ಪಾಲಿಕ್ಲಿನಿಕ್ ಆವರಣದಲ್ಲಿ ಶುಭಾರಂಭಗೊಳ್ಳಲಿದೆ.


ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಮೇಜರ್ ಡೋನರ್ ಡಾ. ಶ್ರೀಪ್ರಕಾಶ್ ಬಿ.ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಲಿನಿಕ್ ಉದ್ಘಾಟನೆಯನ್ನು ಸುಳ್ಯ ಕುರುಂಜಿಭಾಗ್ ಎ.ಎಲ್.ಒ.ಇ ಸಮಿತಿ “ಬಿ’ ಇದರ ಅಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ.ರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಬೊಳ್ವಾರು ಮಹಾವೀರ ಸೆಂಟರ್ ನ ವೈದ್ಯ ಡಾ.ಸುರೇಶ್ ಪುತ್ತೂರಾಯ, ಗೌರವ ಅತಿಥಿಗಳಾಗಿ ರೋಟರಿ ಜಿಲ್ಲೆ 3181, ವಲಯ ಐದರ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ, ವಲಯ ಸೇನಾನಿ, ಆಗಮನಾಭಿಷಿಗಳಾಗಿ ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ಪ್ರೊ|ಸುಬ್ಬಪ್ಪ ಕೈಕಂಬ, ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್ ಮುಖ್ಯಸ್ಥ ಡಾ.ಅಶೋಕ್ ಪಡಿವಾಳ್, ಸುಳ್ಯ ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಮೌರ್ಯ ಆರ್ ಕುರುಂಜಿ, ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕಾರ್ಯ ನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ., ಎ.ಪಿ.ಎಲ್.ಇ ಸಮಿತಿ ‘ಬಿ’ ಕಾರ್ಯದರ್ಶಿ ಡಾ.ಜ್ಯೋತಿ ಆರ್ ಪ್ರಸಾದ್, ನಿರ್ದೇಶಕಿ ಡಾ.ಅಭೀಜ್ಞಾ ಕೆ.ಆರ್, ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್ ಆಡಳಿತ ಪಾಲುದಾರರಾದ ಡಾ.ರಾಜೇಶ್ವರಿ ಪಡಿವಾಳ್, ಪುತ್ತೂರು ಪಾಲಿಕ್ಲಿನಿಕ್ ಮುಖಸ್ಥ ಅಜಯ್ ಪಡಿವಾಳ್, ಸುಳ್ಯ ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ಮೋಕ್ಷ ನಾಯಕ್ ರವರು ಭಾಗವಹಿಸಲಿದ್ದಾರೆ ಎಂದು ಸುಳ್ಯ ಕೆ.ವಿ.ಜಿ ದಂತ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ, ರೋಟರಿ ಕ್ಲಬ್ ಪುತ್ತೂರು ಪ್ರಕಟಣೆ ತಿಳಿಸಿದೆ.



ರೋಟರಿ ಪುತ್ತೂರಿನ 4ನೇ ಶಾಶ್ವತ ಪ್ರಾಜೆಕ್ಟ್ …
61 ವರ್ಷಗಳ ಇತಿಹಾಸವಿರುವ ರೋಟರಿ ಪುತ್ತೂರು ಈಗಾಗಲೇ ಬ್ಲಡ್ ಬ್ಯಾಂಕ್, ಡಯಾಲಿಸಿಸ್ ಕೇಂದ್ರ, ಕಣ್ಣಿನ ಆಸ್ಪತ್ರೆ ಇದೀಗ ನಾಲ್ಕನೇ ಶಾಶ್ವತ ಪ್ರಾಜೆಕ್ಟ್ ಎನಿಸಿದ ರೋಟರಿ ಮಲ್ಟಿ ಸ್ಪೆಷಾಲಿಟಿ ಸ್ಯಾಟಲೈಟ್ ಡೆಂಟಲ್ ಕ್ಲಿನಿಕ್ ಸಾರ್ವಜನಿಕರಿಗೆ ಫಲದಾಯಕವೆನಿಸಲಿದೆ. ಈ ನಾಲ್ಕನೇ ಯೋಜನೆಯು ಸುಳ್ಯ ಕೆ.ವಿ.ಜಿ ದಂತ ಮಹಾವಿದ್ಯಾಲಯದ ನಿರ್ವಹಣೆಯೊಂದಿಗೆ ವಾರದ ಆರು ದಿನ ಕಡಿಮೆ ಶುಲ್ಕ, ವಿಶೇಷ ಆಧುನಿಕ ಸೌಲಭ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಂಡು ಯೋಜನೆಯನ್ನು ಸಾಕಾರಗೊಳಿಸಬೇಕು.
-ಡಾ.ಶ್ರೀಪ್ರಕಾಶ್ ಬಿ, ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು

LEAVE A REPLY

Please enter your comment!
Please enter your name here