ಪುತ್ತೂರು: ಉಪ್ಪಿನಂಗಡಿ ನಾಡ ಕಚೇರಿಯಲ್ಲಿ ಉಪತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿ ಆ.30ರಂದು ನಿವೃತ್ತರಾಗಲಿರುವ ಚೆನ್ನಪ್ಪ ಗೌಡರವರ ಕಂದಾಯ ಇಲಾಖೆ ಸಾರ್ಥಕ, ಪ್ರಾಮಾಣಿಕ ಸೇವೆಗೆ ರೋಟರಿ ಕ್ಲಬ್ ಉಪ್ಪಿನಂಗಡಿ ವತಿಯಿಂದ ಅಭಿನಂದಿಸಿ, ಗೌರವಿಸಿದರು. ರೋಟರಿ ಕ್ಲಬ್ ಉಪ್ಪಿನಂಗಡಿ ಅಧ್ಯಕ್ಷ ಜಾನ್ ಕೆನ್ಯೂಟ್ ಮಸ್ಕರೇನಸ್, ರೋಟರಿ ಕ್ಲಬ್‌ನ ಸಹಾಯಕ ಗವರ್ನರ್ ಡಾ| ರಾಜಾರಾಮ್. ಕೆ.ಬಿ., ಕಾರ್ಯದರ್ಶಿ ಶ್ರೀಕಾಂತ್ ಪಟೇಲ್, ನಿಯೋಜಿತ ಅಧ್ಯಕ್ಷ ಕೇಶವ ಗೌಡ, ಸದಸ್ಯ ಮನ್ಸೂರ್, ಗ್ರಾಮ ಆಡಳಿತಾಧಿಕಾರಿ ನಮಿತ ಹಾಗೂ ಸಿಬ್ಬಂದಿ ರವಿಯವರು ಉಪಸ್ಥಿತರಿದ್ದರು.