ಪುತ್ತೂರು: ಆ.23ರಂದು ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಡಲಕೆರೆ ಮೂಡಬಿದ್ರೆ ಇಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಉಪ್ಪಿನಂಗಡಿ ವೇದಶಂಕರನಗರ ಶ್ರೀರಾಮ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ ಲಭಿಸಿದೆ.
ಕಿಶೋರವರ್ಗ ಬಾಲಕರ ತಂಡ ಪ್ರಥಮ ಸಮಗ್ರ ಪ್ರಶಸ್ತಿ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಕಿಶೋರ್ ವರ್ಗ ಬಾಲಕಿಯರ ತಂಡ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಬಾಲ ವರ್ಗದ ಬಾಲಕರ ತಂಡ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ವೈಯಕ್ತಿಕ ಪ್ರಶಸ್ತಿಗಳು
ಕಿಶೋರ ವರ್ಗ
ಪ್ರಣವ ನರಸಿಂಹ ಶರ್ಮ ಕೆ ಪ್ರಥಮ ಸ್ಥಾನ, ಜಶ್ವಿತ್ ಎ. ದ್ವಿತೀಯ ಸ್ಥಾನ, ಮನೀಶ್ ದ್ವಿತೀಯ ಸ್ಥಾನ (ರಿದಮಿಕ್ ಯೋಗಾಸನ) ಗಳಿಸಿದ್ದಾರೆ.
ಬಾಲ ವರ್ಗ
ರಿದಮಿಕ್ ಯೋಗಾಸನ ಸ್ಪರ್ಧೆಯಲ್ಲಿ ಜಗನ್ ಎಸ್ ಎಲ್ ಆಚಾರ್ಯ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲ ವರ್ಗದ ಬಾಲಕರ ತಂಡದಲ್ಲಿ ಹರ್ಷಿತ್,ತಸ್ಮಯ್ ಹಾಗೂ ಬಾಲಕಿಯರ ವಿಭಾಗದಲ್ಲಿ ವಿ. ಅನನ್ಯ ಇವರು ಯೋಗಾಸನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.