ಐಟಿಐ ಪ್ರಮಾಣಪತ್ರ ಡಿಜಿಟಲೀಕರಣದಲ್ಲಿ ಸಮಸ್ಯೆ : ಉದ್ಯೋಗಿಗಳ ಭವಿಷ್ಯ ಆತಂಕದಲ್ಲಿ

0

ಪುತ್ತೂರು: ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಡಿಜಿಟಲೀಕರಣ ಸಂದರ್ಭ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ವಿವಿಧ ಮಾಹಿತಿಗಳನ್ನು ತಪ್ಪಾಗಿ ನಮೂದಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿದ್ಯಾಭ್ಯಾಸದ ಪ್ರಮಾಣಪತ್ರಗಳ ಜೋಡಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಅಧಿಕಾರಿಗಳ ಎಡವಟ್ಟಿನಿಂದ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.

ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಐಟಿಎ ಪರೀಕ್ಷಾ ಪದ್ಧತಿಯಲ್ಲಿ ಡಿಜಿಟಲ್ ವ್ಯವಸ್ಥೆ ತಂದು ವಿದ್ಯಾರ್ಥಿಗಳಿಗೆ ತ್ವರಿತವಾಗಿ ಪ್ರಮಾಣಪತ್ರ ವಿತರಿಸಲು ಇಲಾಖೆ ಮುಂದಾಗಿದೆ. ಈ ಸಂದರ್ಭ 2007ರಿಂದ 2011ರ ನಡುವಿನ ವಿದ್ಯಾರ್ಥಿಗಳ ಪ್ರಮಾಣಪತ್ರವನ್ನೂ ಡಿಜಿಟಲ್ ವ್ಯವಸ್ಥೆಗೆ ಸೇರ್ಪಡೆ ಮಾಡಲಾಗಿದೆ. ತರಬೇತಿ ಪಡೆದ ವಿಷಯದ ಟ್ರೇಡ್ ಗಳು ಬದಲಾವಣೆಯಾಗಿದೆ ಕಾಲೇಜಿನ ವಿಳಾಸ ಬದಲಾಗುವ ಜತೆಗೆ, ರಾಜ್ಯವೇ ಬೇರೆಯಾಗಿದೆ. ಕೆಲವು ಪ್ರಮಾಣಪತ್ರದ ಸಂಖ್ಯೆಯಲ್ಲಿಯೂ ವ್ಯತ್ಯಾಸವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಹಲವು ಐಟಿಐ ಕಲಿಕೆಯ ಪ್ರಮಾಣಪತ್ರದೊಂದಿಗೆ ಡಿಪ್ಲೊಮಾ ಸಹಿತ ಉನ್ನತ ಶಿಕ್ಷಣ ಪಡೆದಿದ್ದಾರೆ. ಈಗ ಐಟಿಐ ಪ್ರಮಾಣಪತ್ರ ತಾಳೆಯಾಗದೆ, ಉನ್ನತ ಶಿಕ್ಷಣವೇ ನಕಲಿ ಎಂದು ಬಿಂಬಿಸುವ ಸಾಧ್ಯತೆಯಿದೆ. ಉದ್ಯೋಗಿಗಳು ನೀಡಿದ ಮಾಹಿತಿ ಮುಂದಿನ ದಿನಗಳಲ್ಲಿ ಆನ್‌ಲೈನ್ ವೆರಿಫೆಕೇಷನ್ ನಡೆಯುವುದರಿಂದ ಪ್ರಮಾಣಪತ್ರಗಳೇ ನಕಲಿ ಎಂದು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ. ವಿದೇಶದಲ್ಲಿರುವವರಿಗೂ ಇದು ಸಮಸ್ಯೆ, ಹಲವರು ಉದ್ಯೋಗ ಕಳೆದುಕೊಂಡು ಕಾನೂನು ಪ್ರಕ್ರಿಯೆ ಎದುರಿಸುವ ಆತಂಕ ಎದುರಾಗಿದೆ.

ಸಮಸ್ಯೆಯನ್ನು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಗೆ ದೂರು ನೀಡಿದ್ದರು ಅದನ್ನು ತಿರಸ್ಕರಿಸಲಾಗಿದೆ. ಈ ಸಮಸ್ಯೆಗೆ ಏನು ಪರಿಹಾರ ಎಂದು ತಿಳಿಯದೆ ಅನೇಕ ಉದ್ಯೋಗಿಗಳು ದಾರಿ ತೋಚದಂತೆ ಕಾಯುತ್ತಿದ್ದಾರೆ.

LEAVE A REPLY

Please enter your comment!
Please enter your name here