ಬಡಗನ್ನೂರು: ಇಲ್ಲಿನ ಶ್ರೀಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ದ್ವಾರಕಾ ಪ್ರತಿಷ್ಠಾನ(ರಿ) ಪುತ್ತೂರು ಇದರ ವತಿಯಿಂದ ವಿನಾಯಕ ಚೌತಿ ಹಬ್ಬದ ಪ್ರಯುಕ್ತ ಗಣಪತಿ ಹವನ ಹಾಗೂ “ಗುರುದಕ್ಷಿಣೆ” ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ಜರಗಿತು.
ವಿದ್ವಾನ್ ಕೃಷ್ಣಕುಮಾರ ಉಪಾಧ್ಯಾಯರ ನೇತೃತ್ವದಲ್ಲಿ ಮಹಾಗಣಪತಿ ಹವನವು ನೆರವೇರಿತು. ತದನಂತರ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ವೇದಿಕೆಯಲ್ಲಿ ತಾಳಮದ್ದಳೆ ಕಾರ್ಯಕ್ರಮವು ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀಗಳಾದ ಲಕ್ಷ್ಮೀನಾರಾಯಣ ಭಟ್ಟ ಬಟ್ಯಮೂಲೆ, ಆದಿತ್ಯಕೃಷ್ಣ ದ್ವಾರಕಾ, ಚೆಂಡೆ-ಮದ್ದಳೆ-ಚಕ್ರತಾಳದಲ್ಲಿ ಶ್ರೀಹರಿ ಪದ್ಯಾಣ, ಸ್ಕಂದಗಣಪತಿ ಅಡ್ಕಸ್ಥಳ, ಅಕ್ಷರೀ ದ್ವಾರಕಾ ಇವರು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಗಳಾದ, ಗಣರಾಜ ಕುಂಬ್ಳೆ, ವೆಂಕಟೇಶ ಭಟ್ ಬಾಳಿಲ, ಕೃಷ್ಣಮೂರ್ತಿ ಭಟ್ ಕೆಮ್ಮಾರ, ಧನ್ಯಶ್ರೀ ಮಿಂಚಿನಡ್ಕ, ಕೀರ್ತನಾ ಅರ್ತ್ಯಡ್ಕ ಭಾಗವಹಿಸಿದರು.
ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಹಾಗೂ ದ್ವಾರಕಾ ಪ್ರತಿಷ್ಠಾನ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕಲಾವಿದರನ್ನು ಸ್ವಾಗತಿಸಿ, ಗೌರವಿಸಿದರು. ಸಂಸ್ಥೆಗಳ ಸಂಚಾಲಕ ವಿಘ್ನೇಶ್ ಹಿರಣ್ಯ, ಆಡಳಿತ ಮಂಡಳಿಯ ಸದಸ್ಯರುಗಳಾದ ಹರಿಕೃಷ್ಣ ಭಟ್, ವೆಂಕಟಕೃಷ್ಣ ಶರ್ಮ,ಜಿ ಪರಮೇಶ್ವರ ಭಟ್, ಮುಖ್ಯ ಗುರು ಸುಮನ ಬಿ , ರಾಜಗೋಪಾಲ ಎನ್, ಪೋಷಕ ಮಂಡಳಿಯ ಸದಸ್ಯರು ಹಾಗೂ ಪೋಷಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.