ಕೆಯ್ಯೂರು: ಮಾಡಾವು ಅಯ್ಯಪ್ಪ ಭಕ್ತ ವೃಂದ ಹಾಗೂ ಅಭಿನವ ಕೇಸರಿ ಮಾಡಾವು ಇದರ ಆಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಅಂಗವಾಗಿ ವಿವಿಧ ಕ್ರೀಡಾಕೂಟ ಮಾಡಾವು ಕಟ್ಟೆಯ ಅಯ್ಯಪ್ಪ ಭಜನಾ ಮಂದಿರದ ಬಳಿ ಆ.24ರಂದು ನಡೆಯಿತು.
ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೈ ಬೊಳಿಕಲ ಶೇಡಿ ಗೌರವಾಧ್ಯಕ್ಷರು ಅಭಿನವ ಕೇಸರಿ ಮಾಡಾವು,ವಹಿಸಿದ್ದರು. ಭೌದ್ದಿಕ್ ಕಾರ್ಯಕ್ರಮವನ್ನು ಶರಾವತಿ ರವಿ ನಾರಾಯಣ ಪುತ್ತೂರು ದುರ್ಗಾ ವಾಹಿನಿ ಸಂಯೋಜಕಿ ವಿಶ್ವ ಹಿಂದೂ ಪರಿಷತ್ ಪುತ್ತೂರು ನಗರ ಪ್ರಖಂಡ, ವಾಚಿಸಿದರು. ಮುಖ್ಯ ಅತಿಥಿಗಳಾಗಿ ಹಿಂದೂ ಮುಖಂಡ ಪುತ್ತೂರು ಅರುಣ್ ಕುಮಾರ್ ಪುತ್ತಿಲ, ವಿಜಯ ಸಾಮ್ರಾಟ್ ರಿ ಪುತ್ತೂರು ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ, ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಮಾತೃಶ್ರೀ ಅರ್ಥ್ ಮೂವರ್ಸ್ ಮೋಹನ್ ದಾಸ್ ರೈ ಕುಂಬ್ರ, ಶ್ರೀ ಕ್ಷೇತ್ರ ಕೆಯ್ಯೂರು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ, ದ.ಕ ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಮಾರ್ತ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ರೀಡಾಕೂಟದ ಕಾರ್ಯಕ್ರಮಗಳು
ಕೃಷ್ಣ ವೇಷ [0-3 ವರ್ಷ] ಪ್ರಥಮ ನಿತಾರ ರೈ, ದ್ವಿತೀಯ ವೈಸ್ನಿಕ್ (4 ರಿಂದ 6 ವರ್ಷ) ಪ್ರಥಮ ಚಾರ್ವಿ ರೈ, ದ್ವಿತೀಯ ಮೀತಾಂಶು, ಮಹಿಳೆಯರ ಹಗ್ಗ ಜಗ್ಗಾಟ ಪ್ರಥಮ ಮತ್ತು ಶ್ರೀ ತಂಡ, ದ್ವಿತೀಯ ಧರ್ಮರಸು ಪಾಲ್ತಾಡಿ, ಜಾರು ಕಂಬ ನಡಿಗೆ ಸತ್ಯರಾಜ್ ಕೋರಿಕ್ಕಾರ್, ಮೊಸರು ಕುಡಿಕೆ ಪುರುಷರ ವಿಭಾಗ, ಸುರೇಶ್ ಪರ್ತ್ಯಡ್ಕಾ, ಮಹಿಳೆಯರ ಮೊಸರು ಕುಡಿಕೆ:ರೂಪಿಕಾ, ಪುರುಷರ ಕಬ್ಬಡ್ಡಿ ಪ್ರಥಮ, ಶ್ರೀ ದುರ್ಗಾ ಅರಿಯಡ್ಕ ದ್ವಿತೀಯ ಅಭಿಮನ್ಯು ತಿಂಗಳಾಡಿ, ಪುರುಷರ ವಾಲಿಬಾಲ್, ಪ್ರಥಮ ಎಸ್ ಎಂ ಟಿ ಕೌಡಿಚಾರ್ , ದ್ವಿತೀಯ ಹೊಸಮ್ಮ ಫ್ರೆಂಡ್ಸ್ ಪಲ್ಲತಡ್ಕ ಭಾಗವಹಿಸಿ ವಿಜೇತರು ಬಹುಮಾನವನ್ನು ಪಡೆದುಕೊಂಡರು.
ಸನ್ಮಾನ ಕಾರ್ಯಕ್ರಮ
ವಿಶ್ವ ಹಿಂದೂ ಪರಿಷತ್ ಕೆಯ್ಯೂರು ಕಾರ್ಯಕರ್ತರಾದ ತುರ್ತು ಚಿಕಿತ್ಸಾ, ಅಂಬುಲೆನ್ಸ್ ಚಾಲಕರಾದ ಚರಣ್ ಕುಮಾರ್ ಸನಂಗಳ, ದಿನೇಶ್ ಆಚಾರ್ಯ ಕೆಯ್ಯೂರು, ಅಜಿತ್ ರೈ ಕೆಯ್ಯೂರು, ಯಕ್ಷ ಗುರು ವಾಸುದೇವ ರೈ ಬೆಳ್ಳಾರೆ, ಇವರನ್ನು ಶಾಲು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಯಕ್ಷಗಾನ
ಅಭಿನವ ಯಕ್ಷಕಲಾ ಕೇಂದ್ರ ಮಾಡಾವು ಇದರ ವಿದ್ಯಾರ್ಥಿಗಳಿಂದ ಶ್ರೀ ವಾಸುದೇವ ರೈ ಬೆಳ್ಳಾರೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಕೆಯ್ಯೂರು ಇವರ ನಿರ್ದೇಶನದಲ್ಲಿ ಲೀಲಾವಿನೋದಿ – ಶ್ರೀಕೃಷ್ಣ ಯಕ್ಷಗಾನ ರಂಗ ಪ್ರವೇಶ ಮತ್ತು ಪ್ರದರ್ಶನ ನಡೆಯಿತು.
ಸಂದರ್ಭದಲ್ಲಿ ಮೋಹನ್ ದೇವಾಡಿಗ, ರಾಮಚಂದ್ರ ಆಚಾರ್ಯ, ದಿಕ್ಷೀತ್ ಅಮೀನ್, ಸತೀನ್ ಕಂಪ, ವಸಂತ ರೈ, ಜಯದೀಪ್, ಹರೀಶ್ ಕುಲಾಲ್, ಸಚೀನ್ ಪರ್ತ್ಯಡ್ಕ, ವಿನೋದ್ ಕೊಡ್ಲೆ, ಕಿಸಾನ್, ಕವಿತ, ಮಂಜುಳ ಮಾಡಾವು, ಶೀಲಾ ಮಾಡಾವು, ಮೀನಾಕ್ಷಿ ವಿ ರೈ, ಅರ್ಚನಾ ರೈ,ಮನೋಜ್ ಬೊಳಿಕಲ, ಕಿರ್ತನ್, ಸುರೇಶ್ ಪರ್ತ್ಯಡ್ಕ, ರಕ್ಷಿತ್ ಉಪ್ಪಳಿಗೆ, ಪವನ್ ಕಂಪ, ರಾಕೇಶ್, ಭವಿತ್, ಜಯಂತ್, ಭವಾನಿ ಶಂಕರ, ಅಶೋಕ, ದೀಕ್ಷಿತ್ ಬೋಳಿಕಳ, ಹರೀಶ ಸನಂಗಲಾ, ಪ್ರಮೋದ್, ವಿನೋದ್ ಕೊಡ್ಲೆ, ಸುಚಿತ್ ರೈ ಶೇಡಿ, ಪ್ರನೀತ್ ರೈ ಕುಕ್ಕೆಹಳ್ಳಿ, ಸಚಿನ್ ಪ್ರತ್ಯಾಡ್ಕ, ಸೌರವ್, ಪವನ್ ಕಂಪ, ಪ್ರಜ್ವಲ್ ರೈ, ಅಭಿಷೇಕ್ ರೈ, ನಾಗರಾಜ ಶೆಟ್ಟಿ, ಚೇತನ್ ಆಚಾರ್ಯ, ಆಕರ್ಷ ಸಹಕರಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.