ರಾಮಕುಂಜ: ಕೊಯಿಲ ಗ್ರಾಮದ ಆರುವಾರ ಬಾಳಿಕೆ ಗಾಂಧಿಗುಡ್ಡೆ ನಿವಾಸಿ, ನಿವೃತ್ತ ಮುಖ್ಯಶಿಕ್ಷಕ ಕೇನ್ಯ ರಘುನಾಥ ರೈ ಅವರ ಪತ್ನಿ ಹರಿಣಾಕ್ಷಿ ಆರ್.ರೈ (74ವ.) ಅವರು ಆ.27ರಂದು ರಾತ್ರಿ ಮಂಗಳೂರಿನ ಫಾದರ್ ಮುಲ್ಲಾರ್‍ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
20 ದಿನದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಹರಿಣಾಕ್ಷಿ ರೈ ಅವರನ್ನು ಚಿಕಿತ್ಸೆಗಾಗಿ ಫಾದರ್ ಮುಲ್ಲಾರ್‍ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.
ಮೃತರು ಪತಿ ಕೇನ್ಯ ರಘುನಾಥ ರೈ, ಪುತ್ರರಾದ ಮಣಿಪಾಲ ಜೂನಿಯರ್ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ದಿನೇಶ್, ಚೀನಾದಲ್ಲಿರುವ ಡಾ| ಲಕ್ಷ್ಮೀಶ ರೈ, ಕೊಯಿಲ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್‌ಕುಮಾರ್ ರೈ ಅವರನ್ನು ಅಗಲಿದ್ದಾರೆ.
ಇಂದು ಸಂಜೆ ಅಂತ್ಯಕ್ರಿಯೆ
ಮೃತರ ಪಾರ್ಥಿವ ಶರೀರ ಆರುವಾರ ಗಾಂಧಿಗುಡ್ಡೆ ನಿವಾಸಕ್ಕೆ ಮಧ್ಯಾಹ್ನ ೧ ಗಂಟೆಗೆ ತಲುಪಲಿದ್ದು ಸಂಜೆ ೫ ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.