ಸವಣೂರು ಪಣೆಮಜಲು: ಯಕ್ಷಗಾನ ಬಯಲಾಟದ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಕಟ್ಟೆ ಸಮಿತಿ ಪಣೆಮಜಲು, ಸವಣೂರು ಇದರ ವತಿಯಿಂದ ಆ.27 ರಂದು ಗಣೇಶ ಚತುರ್ಥಿಯ ಪ್ರಯುಕ್ತ 19ನೇ ವರ್ಷದ ಸಾರ್ವಜನಿಕ ಗಣಪತಿ ಹೋಮ ಪಣೆಮಜಲು ಕಟ್ಟೆಯ ಬಳಿ ನಡೆಯಿತು. ಈ ಸಂದರ್ಭ ಅ.2 ರಂದು ವಿಜಯ ದಶಮಿ ಪ್ರಯುಕ್ತ ನಡೆಯುವ ಯಕ್ಷಗಾನ ಬಯಲಾಟದ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು.

ಸಮಿತಿಯ ಗೌರವಾದ್ಯಕ್ಷ ಜಿ.ಪಂ, ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ವೀರಮಂಗಲ ಪಿ.ಎಂ ಶ್ರೀ ಶಾಲೆಯ ಮುಖ್ಯಗುರು ತಾರನಾಥ ಸವಣೂರು ನಾಟಿ ವೈದ್ಯ ಇ.ಎಸ್, ವಾಸುದೇವ ಇಡ್ಯಾಡಿ,ಕುಶಾಲಪ್ಪ ಗೌಡ ಇಡ್ಯಾಡಿ, ಗುಡ್ಡಪ್ಪ ಗೌಡ ಇಡ್ಯಾಡಿ, ಸಂಜೀವ ಪೂಜಾರಿ ಅಗರಿ, ರತ್ನಾಕರ ಅಗರಿ,ಕಟ್ಟೆ ಸಮಿತಿಯ ಅಧ್ಯಕ್ಷ ಮೋನಪ್ಪ ಗೌಡ ಇಡ್ಯಾಡಿ ಹಾಗೂ ಸಮಿತಿಯ ಎಲ್ಲಾ ಸದಸ್ಯರು, ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here