ನೆಲ್ಯಾಡಿ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರಿಗೆ ಬೈಕ್ ಡಿಕ್ಕಿಯಾದ ಘಟನೆ ಕಡಬ ತಾಲೂಕಿನ ಕೊಣಾಜೆ ಗ್ರಾಮದ ಕಡ್ಯ ಎಂಬಲ್ಲಿ ಆ.26ರಂದು ಸಂಜೆ ನಡೆದಿದೆ.
ಕೊಣಾಜೆ ಸಿಆರ್ಸಿ ಕಾಲೋನಿ ನಿವಾಸಿ ಶೈಲಜ ಇ.(57ವ.) ಗಾಯಗೊಂಡವರಾಗಿದ್ದಾರೆ. ಇವರು ಉದನೆ-ಕಡ್ಯ ಸಾರ್ವಜನಿಕ ಡಾಮರು ರಸ್ತೆಯ ಕೊಣಾಜೆ ಗ್ರಾಮದ ಕಡ್ಯ ಎಂಬಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವಾಗ ಕೆಎ19, ಇಎ 2603 ನೋಂದಣಿ ನಂಬ್ರದ ಬೈಕ್ ಡಿಕ್ಕಿಯಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಶೈಲಜ ಅವರನ್ನು ಚಿಕಿತ್ಸೆಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.