ಪುತ್ತೂರು: ಕರ್ನಾಟಕ ರಾಜ್ಯ ಡಾ| ಗಂಗೂಬಾಯಿ ಹಾನಗಲ್ ಯೂನಿವರ್ಸಿಟಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಸಾನ್ವಿ ಡಿ. ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ. ಪುತ್ತೂರು ಶಾರದ ಕಲಾ ಕೇಂದ್ರದ ಗುರುಗಳಾದ ವಿದ್ವಾನ್ ಸುದರ್ಶನ್ ಎಂ ಎಲ್ ಭಟ್ ಅವರ ಶಿಷ್ಯೆಯಾಗಿರುವ ಇವರು ವಿವೇಕಾನಂದ ತೆಂಕಿಲ ಆ,ಮಾ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ. ಈಕೆ ಬಾಲಚಂದ್ರ ಡಿ ಹಾಗೂ ಅನುಪಮ ಪಿ.ಎಕ್ ದಂಪತಿಯ ಪುತ್ರಿ.