ಪುತ್ತೂರು: ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ನ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯ ಎರಡನೇ ಹಂತದ ಜಿಲ್ಲಾಮಟ್ಟದ ತಂಡಗಳ ತಾಳಮದ್ದಳೆಯು ಪೆರಿಯಡ್ಕದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ನಡೆಯಿತು.

ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಪ್ರಸನ್ನ ಕುಮಾರ್ ಪೆರಿಯಡ್ಕ ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು.ಶ್ರೀ ಕಾಳಿಕಾಂಬ ಯಕ್ಷ ಕಲಾಟ್ರಸ್ಟ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ, ಪ್ರಸ್ತಾವನೆಗೈದರು.
ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಕೃಷ್ಣಾಷ್ಟಮಿ ಸಮಿತಿ ಅಧ್ಯಕ್ಷ ಸುರೇಶ ಅತ್ರಮಜಲು, ಶ್ರೀ ರಾಮ ಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ, ಶೀನಪ್ಪ ಗೌಡ ಪೆರಿಯಡ್ಕ, ಪ್ರಶಾಂತ್ ಪೆರಿಯಡ್ಕ, ಬಿ. ಸುಬ್ರಹ್ಮಣ್ಯ ರಾವ್, ಪಾತಾಳ ಅಂಬಾ ಪ್ರಸಾದ, ಕಲಾವಿದ, ಸಂಘಟಕ ರವಿ ಅಲೆವೂರಾಯ ವರ್ಕಾಡಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಲಾ ಕೇಂದ್ರದ ಸಂಚಾಲಕ ಕೆ.ಮಹಾಲಿಂಗೇಶ್ವರ ಭಟ್ ವಂದಿಸಿದರು.
ಸರಯೂ ಯಕ್ಷ ಬಳಗ ಕೋಡಿಕಲ್ ಮಂಗಳೂರು ತಂಡದಿಂದ ಸುಧನ್ವ ಮೋಕ್ಷದಲ್ಲಿ ಭಾಗವತರಾಗಿ ಗೋಪಾಲಕೃಷ್ಣ ಭಟ್ ಗುತ್ತಿಗಾರು ಹಿಮ್ಮೇಳದಲ್ಲಿ ವೆಂಕಟೇಶ ಭಟ್ ಗುತ್ತಿಗಾರು,ಬಾಲಸುಬ್ರಮಣ್ಯ ಭಟ್ ಗುತ್ತಿಗಾರು ಅರ್ಥಧಾರಿಗಳಾಗಿ ರವಿ ಅಲೆವೂರಾಯ ವರ್ಕಾಡಿ, ವಿಜಯಲಕ್ಷ್ಮಿ ಎಂ.ಎಲ್, ಅಕ್ಷಯ ಸುವರ್ಣ, ಡಾ. ಸುಮನಾ ಹೊಳ್ಳ, ಬನಶಂಕರಿ ಯಕ್ಷಕಲಾ ಪಣೆಜಾಲು ಗುರುವಾಯನಕೆರೆ ತಂಡದಿಂದ ವೀರ ವೃಷಸೇನ ಭಾಗವತರಾಗಿ ನಿತೀಶ್ ಮನೋಳಿತ್ತಾಯ, ಕಿಶೋರ್ ಶೆಟ್ಟಿ ಮಡಂತ್ಯಾರು, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ,ಚಂದ್ರಶೇಖರ ಆಚಾರ್ಯ ಗೇರುಕಟ್ಟೆ ಅರ್ಥಧಾರಿಗಳಾಗಿ ಜಿನೇಂದ್ರ ಜೈನ್ ಬಳ್ಳಮಂಜ, ಶಿವಾನಂದ ಭಂಡಾರಿ, ಸತೀಶ ಶಿರ್ಲಾಲು, ಕೃಷ್ಣ ಪಡಂಗಡಿ, ಸಾಂಸ್ಕೃತಿಕ ಕಲಾವೇದಿಕೆ ಪೆರಿಯಡ್ಕ ತಂಡದಿಂದ ಅನುಸಾಲ್ವ ಕಾಳಗ ಭಾಗವತರಾಗಿ ಡಿ.ಕೆ ಆಚಾರ್ಯ ಅಲಂಕಾರು, ಬಿ. ವೆಂಕಟರಮಣ ರಾವ್ ಉಜಿರೆ, ಪದ್ಮನಾಭ ಕುಲಾಲ್ ಇಳಂತಿಲ ನಿತೀಶ್ ಮನೋಳಿತ್ತಾಯ ಅರ್ಥಧಾರಿಗಳಾಗಿ ಮಹಾಲಿಂಗೇಶ್ವರ ಭಟ್, ದಿವಾಕರ ಆಚಾರ್ಯ ಗೇರುಕಟ್ಟೆ, ಜಯರಾಮ ನಾಲ್ಗುತ್ತು, ಶ್ರೀಧರ ಎಸ್ಪಿ ಸುರತ್ಕಲ್, ಹರೀಶ ಆಚಾರ್ಯ ಬಾರ್ಯ, ಜಿನೇಂದ್ರ ಜೈನ್, ಶ್ರೀಮತಿ ಶ್ರುತಿ ವಿಸ್ಮಿತ್ ಬಲ್ನಾಡು ಭಾಗವಹಿಸಿದ್ದರು.
ಭಾಗವಹಿಸಿದ ತಂಡಗಳ ಮುಖ್ಯಸ್ಥರನ್ನು ಪುತ್ತೂರು ಬೊಳುವಾರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ಬಿ ಸುಬ್ರಮಣ್ಯ ರಾವ್ ಬನ್ನೆಂಗಳ, ಕೆ.ಮಹಾಲಿಂಗೇಶ್ವರ ಭಟ್ ಮತ್ತು ಶ್ರೀಮತಿ ದುರ್ಗಾಮಣಿ. ಎಂ ಪ್ರಸಂಶಾ ಪತ್ರ, ಸ್ಮರಣಿಕೆಯೊಂದಿಗೆ ಗೌರವಿಸಿದರು.