ಆ.31:ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಕಛೇರಿಯ ಹಿರಿಯ ವಾಹನ ಚಾಲಕ ಎಂ.ಲೀಲಯ್ಯ ಸೇವಾ ನಿವೃತ್ತಿ

0

ಪುತ್ತೂರು: ಆರೋಗ್ಯ ಇಲಾಖೆಯಲ್ಲಿ ವಿವಿಧ ಕಡೆ ಸುಮಾರು 37 ವರ್ಷ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸಿರುವ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಕಛೇರಿಯ
ಹಿರಿಯ ವಾಹನ ಚಾಲಕ ಎಂ.ಲೀಲಯ್ಯರವರು ಆ.31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.


ಅರಿಯಡ್ಕ ಗ್ರಾಮದ ಮುಂಡಕೊಚ್ಚಿಯಲ್ಲಿ ಎನ್.ಬಾಲಕೃಷ್ಣ ಹಾಗೂ ಶ್ರೀಮತಿ ಭಾಗೀರಥಿ ದಂಪತಿಯ ಪುತ್ರನಾಗಿ ಜನಿಸಿದ ಎಂ.ಲೀಲಯ್ಯರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ನನ್ಯ ಹಾಗೂ ಕಾವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಿಕ್ಷಣವನ್ನು ಪೆರ್ನಾಜೆ ಶ್ರೀ ಸೀತಾ ರಾಘವ ಪ್ರೌಢಶಾಲೆಯಲ್ಲಿ ಪೂರೈಸಿದರು. ಪ್ರಗತಿಪರ ಕೃಷಿಕರಾಗಿರುವ ಇವರು ಅಂಬಿಕಾ ಮೋಟಾರ್ ಡ್ರೈವಿಂಗ್ ಸ್ಕೂಲ್‌ನಲ್ಲಿ ವಾಹನ ಚಾಲನಾ ಪರವಾಣಿಗೆಯನ್ನು ಪಡೆದು 1988ರಲ್ಲಿ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾಹನ ಚಾಲಕರಾಗಿ ವೃತ್ತಿ ಸೇವೆಯನ್ನು ಆರಂಭಿಸಿದ್ದರು. 2000-05 ರವರೆಗೆ ಸುಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರ, 2005ರಿಂದ 2025ರ ವರೆಗೆ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಕಛೇರಿಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಲಿರುವರು.


1988-89ನೇ ಸಾಲಿನಲ್ಲಿ ಪುತ್ತೂರಿನ ಇಂದಿರಾ ಕ್ಯಾಂಟೀನ್ ಬಳಿಯ ಪುತ್ತೂರು ಸರಕಾರಿ ವಾಹನ ಚಾಲಕರ ಸಂಘ(ಸ್ವಂತ ಕಟ್ಟಡ ಸಾರಥಿ ಭವನ)ದ ಸದಸ್ಯರಾಗಿ, ಕೋಶಾಧಿಕಾರಿಯಾಗಿ, 2024ನೇ ಜೂನ್ ಒಂದರಿಂದ ಅಧ್ಯಕ್ಷರಾಗಿ, ಪುತ್ತೂರು ತಾಲೂಕು ಸರಕಾರಿ ನೌಕರರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು, 2012ರಲ್ಲಿ ಹಿರಿಯ ವಾಹನ ಚಾಲಕರಾಗಿ ಭಡ್ತಿ ಹೊಂದಿರುತ್ತಾರೆ. ಎಂ.ಲೀಲಯ್ಯರವರು ಪತ್ನಿ ಶ್ರೀಮತಿ ಕೆ.ಭಾರತಿ, ಎಂಕಾಂ ಪದವೀಧರಾಗಿರುವ ಪುತ್ರಿಯರಾದ ಶ್ರೀಮತಿ ದಿವ್ಯಶ್ರೀ ಎಂ, ಪೂಜಾಶ್ರೀ ಎಂ, ಅಳಿಯ ಬೆಂಗಳೂರಿನ ಕಂಪೆನಿಯಲ್ಲಿ ಉದ್ಯೋಗದಲ್ಲಿರುವ ವಿಶಾಖ್ ರಾಜ್‌ರವರೊಂದಿಗೆ ಕಾವು ಎಂಬಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here