ಪುತ್ತೂರು: ಮುಖ್ಯ ರಸ್ತೆಯಲ್ಲಿರುವ ಜಿ.ಎಲ್.ಕಾಂಪ್ಲೆಕ್ಸ್ ಮುಂಭಾಗದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮಿತ್ ಹರ್ಬಲ್ ಬ್ಯೂಟಿ ಪಾರ್ಲರ್ ಜಿಎಲ್ ಕಾಂಪ್ಲೆಕ್ಸ್ ಕಟ್ಟಡದ ನೆಲಮಹಡಿಗೆ ಸ್ಥಳಾಂತರಗೊಂಡು ಸೆ.4ರಂದು ಶುಭಾರಂಭಗೊಳ್ಳಲಿದೆ.
ಜಿ.ಎಲ್. ಸಮೂಹ ಸಂಸ್ಥೆಗಳ ಅಧ್ಯಕ್ಷ ಜಿ.ಎಲ್. ಬಲರಾಮ ಆಚಾರ್ಯ ಅವರು ಪಾರ್ಲರ್ ಉದ್ಘಾಟಿಸಲಿದ್ದಾರೆ. ಗ್ರಾಹಕರು ಎಂದಿನಂತೆ ಸಹಕರಿಸಬೇಕು ಎಂದು ಮಾಲಕಿ ವಿದ್ಯಾ ರಾಜೇಶ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಅಮಿತ್ ಬ್ಯೂಟಿ ಪಾರ್ಲರ್ ಕಳೆದ 20 ವರ್ಷಗಳಿಂದ ಗ್ರಾಹಕರಿಗೆ ಸೇವೆಯನ್ನು ನೀಡುತ್ತಾ ಬರುತ್ತಿದ್ದು, ಹೇರ್ ಕಟ್ಟಿಂಗ್, ಸ್ಟ್ರೈಟಿಂಗ್, ಹರ್ಬಲ್ ಫೇಶಿಯಲ್, ಮೆನಿಕ್ಯೂರ್, ಹೆನ್ನಾ ಹೇರ್ ಡೈ, ಮೆಹಂದಿ, ಹೆಡ್ ಮಸಾಜ್, ಹೇರ್ ಕಲರಿಂಗ್, ಬ್ರೈಡಲ್ ಮೇಕಪ್ ಸೇವೆಯನ್ನು ನೀಡಲಾಗುತ್ತಿದೆ.