ಪುತ್ತೂರು: ಕಡಬ ಗ್ರಾಮ ಪಿಜಕ್ಕಳ ಶಾಲಾ ಬಳಿಯಿಂದ ಗೊಡಾಲ್ ಮೂಲಕ ಹೊಸ್ಮಠಕ್ಕೆ ಹೋಗುವ ರಸ್ತೆಯು ನಡೆದುಕೊಂಡು ಹೋಗಲು ಸಾದ್ಯವಿಲ್ಲದೇ ದುರಸ್ತಿಯಲ್ಲಿದ್ದು ಇದನ್ನು ಊರಿನ ನಾಗರೀಕರು ಶ್ರಮದಾನದ ಮೂಲಕ ಆ.31ರಂದು ದುರಸ್ತಿಗೊಳಿಸಿದರು.

ಈ ಶ್ರಮದಾನದಲ್ಲಿ ಪಿಜಕ್ಕಳ ಶಾಲಾ ಅಭಿವೃದ್ದಿ ಸಮಿತಿ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ಬಳಗ ಪಿಜಕ್ಕಳ ಸದಸ್ಯರು, ಪಿಜಕ್ಕಳ ಬಿಜೆಪಿ ಕಾರ್ಯಕರ್ತರು, ಕಡಬ ಪಟ್ಟಣ ಪಂಚಾಯತ್ ನೂತನ ಸದಸ್ಯರಾದ ದಯಾನಂದ ಗೌಡ ಪಿಜಕ್ಕಳ, ಲೋಕೇಶ್ ಗೌಡ ಆರ್ತಿಲ,ಮಾಜಿ ಸೈನಿಕ ರಾದ ಸುಂದರ ಗೌಡ ಪಿಜಕ್ಕಳ, ಗಣೇಶ್ ಆರ್ತಿಲ, ಕಿಶೋರ್ ಕುಮಾರ್ ರೈ ,ವಾಸುದೇವ ಗೌಡ ಕೊಲ್ಲಡ್ಕ,ವೇಣುಗೋಪಾಲ ರೈ ಪಿಜಕ್ಕಳ,ರಾಮಣ್ಣ ಗೌಡ ಗೊಡಾಲ್,ಹರಿಯಪ್ಪ ಗೌಡ ಪಿಜಕ್ಕಳ, ನೋಣ್ಣಪ್ಪ ಗೌಡ ಗೊಡಾಲ್,ನಾರಾಯಣ ಗೌಡ ಆರ್ತಿಲ,ಸುಬ್ರಾಯ, ಸತೀಶ ಆರ್ತಿಲ,ಅಶೋಕ್ ರೈ ಮತ್ತಿತರರು ಭಾಗವಹಿಸಿದರು