ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಧಿಕಾರಿಗಳ ಕಛೇರಿ ಪುತ್ತೂರು ಮತ್ತು ನರಿಮೊಗರು ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ಶಾಲೆ ಆಶ್ರಯದಲ್ಲಿ 2025-26 ನೇ ಸಾಲಿನ ಪುತ್ತೂರು ಶೈಕ್ಷಣಿಕ ವಲಯದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಬಾಲಕ ಹಾಗೂ ಬಾಲಕಿಯರ ಯೋಗಾಸನ ಸ್ಪರ್ಧೆ ಸೆ.1ರಂದು ಸಾಂದೀಪನಿ ಶಾಲೆಯ ಶ್ರೀ ಗೋಪಾಲಕೃಷ್ಣ ವೇದಿಕೆಯಲ್ಲಿ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಾಂದೀಪನಿ ಶಾಲಾ ಯೋಗ ಶಿಕ್ಷಕ ಹಾಗೂ ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷರು ದಕ್ಷಿಣ ಕನ್ನಡ ಇದರ ನವೀನ್ ಆಸನಗಳ ಬಗ್ಗೆ ಹಾಗೂ ಪಾಲಿಸ ಬೇಕಾದ ಸ್ಪರ್ಧೆಗಳ ನಿಯಮಗಳ ಬಗ್ಗೆ ವಿವರಿಸಿದರು.
ದೀಪ ಬೆಳಗಿಸಿ ಮಾತನಾಡಿದ ಅಕ್ಷರ ದಾಸೋಹ ಸಹನಿರ್ದೇಶಕ ವಿಷ್ಣುಪ್ರಸಾದ್ ,ಮನುಷ್ಯನಿಗೆ ಪ್ರತಿ ದಿನ ಅನ್ನ, ನೀರು ಹೇಗೆ ಮುಖ್ಯವೋ ಅದೇ ರೀತಿ ಯೋಗವೂ ಮುಖ್ಯ.
ಸ್ಪರ್ಧೆಯಲ್ಲಿ ನಾನೇ ಗೆಲ್ಲಬೇಕೆಂಬ ಭಾವನೆಯನ್ನು ಬಿಟ್ಟು ಗೆದ್ದವರಿಗೆ ಪ್ರೋತ್ಸಾಹಿಸುವ ಗುಣವನ್ನು ಬೆಳೆಸಿಕೊಳ್ಳಿ ಎಂದರು.
ಕ್ಷೇತ್ರದ ದೈಹಿಕ ಶಿಕ್ಷಣ ಪರಿವೀಕ್ಷಕ ಚಕ್ರಪಾಣಿ ಮಾತನಾಡಿ, ವಲಯ ಮಟ್ಟದಿಂದ ತಾಲೂಕು ಮಟ್ಟದಲ್ಲಿ ಯೋಗ ಸ್ಪರ್ಧೆಯನ್ನು ನಡೆಸುವಾಗ ಹಲವು ಶಾಲೆಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸಾಂದೀಪನಿ ವಿದ್ಯಾಸಂಸ್ಥೆಯು ಎಲ್ಲಾ ಸೌಲಭ್ಯ ಗಳನ್ನು ಒದಗಿಸಿ ಒಪ್ಪಿ ಕೊಂಡದ್ದು ತುಂಬಾ ಖುಷಿ ತಂದಿದೆ ತೀರ್ಪುಗಾರರು ಉತ್ತಮ ಆಯ್ಕೆಯನ್ನು ಮಾಡಲಿ
ಎಲ್ಲಾ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮಾತನಾಡಿ, ಯೋಗ ಎಂಬುದು ಶರೀರ, ಮನಸ್ಸು, ಆಯುಷ್ಯಗಳನ್ನು ಸಮತೋಲನದಲ್ಲಿ ಇಡುವ ವಿಧಾನ. ಶರೀರದ ಚಲನೆಯನ್ನು, ಬುದ್ದಿಯನ್ನು ಸ್ಥಿರತೆಯಲ್ಲಿ ಇಡಲು ಸಹಕಾರಿಯಾಗಿದೆ ಯೋಗ. ನಮ್ಮ ಶಾಲೆಯಲ್ಲಿ ಯೋಗ ಶಿಕ್ಷಣವನ್ನು ಕಲಿಯುವ ಅವಕಾಶವಿದ್ದು ಇದು ಒಳ್ಳೆಯ ಸ್ಪರ್ಧೆಯಾಗಲಿ ಸುಸೂತ್ರವಾಗಿ ನಡೆಯಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಹಾಗೂ ಕ್ಷೇತ್ರ ಶಿಕ್ಷಣ ಸಂಯೋಜಕ ಹರಿಪ್ರಸಾದ್, ಕ್ಷೇತ್ರ ಸಮನ್ವಯ ಸಂಪನ್ಮೂಲ ಶಿಕ್ಷಕಿ ತನುಜಾ, ನರಿಮೊಗರು ಕ್ಲಸ್ಟರ್ ವಲಯದ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ, ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್, ಸವಣೂರು ಸಿ ಆರ್ ಪಿ ಜಯಂತ್, ನೋಡಲ್ ಅಧಿಕಾರಿ ಪ್ರೌಢ ವಿಭಾಗ ಕುಂಬ್ರ ಇಲ್ಲಿಯ ಕೃಷ್ಣ ಪ್ರಸಾದ್, ಶಾಲಾ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕೆದಿಲಾಯ, ಆಡಳಿತ ಮಂಡಳಿಯ ಕೋಶಾಧಿಕಾರಿ ಹರೀಶ್ ಪುತ್ತೂರಾಯ, ಆಡಳಿತ ಮಂಡಳಿ ಸದಸ್ಯ ಸುಬ್ರಾಯ ಶೆಟ್ಟಿ ಹಾಗೂ ಯೋಗ ಪರಿಣಿತರು, ತೀರ್ಪುಗಾರರು, ತರಬೇತುದಾರರು, ತಂಡದ ವ್ಯವಸ್ಥಾಪಕರು, ವಿವಿಧ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಗುರುಗಳಾದ ಪ್ರಸನ್ನ ಕೆ ಸ್ವಾಗತಿಸಿದರು. ಸಾಯಿ ಸಂಚಿತ್ ಮತ್ತು ಪ್ರಥಮ್ ಕಾಯರ್ಗ ಪ್ರಾರ್ಥಿಸಿದರು. ನೀತು ನಾಯಕ್ ನಿರೂಪಿಸಿದರು.ಉಷಾ ವಂದಿಸಿದರು.
ನಂತರ ವಿವಿಧ ಯೋಗ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.