ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ದ. ಕ ಜಿಲ್ಲಾ ಮಟ್ಟದ ಗಣಿತ ವಿಜ್ಞಾನ ಮೇಳ, ಸಂಸ್ಕೃತಿ ಮಹೋತ್ಸವ ಜ್ಞಾನ – ವಿಜ್ಞಾನ ಮೇಳ 2025-26ರಲ್ಲಿ ಶ್ರೀರಾಮ ಕಲ್ಲಡ್ಕದಲ್ಲಿ ನಡೆಯಿತು.
ಇದರಲ್ಲಿ ಪಾಲ್ಗೊಂಡ ನರಿಮೊಗರು ಸಾಂದೀಪನಿ ಶಾಲಾ ವಿದ್ಯಾರ್ಥಿಗಳಾದ 10ನೇ ತರಗತಿಯ ವಿದ್ಯಾರ್ಥಿಗಳಾದ ಅಜಿತೇಶ್ ಜೆ. ಯನ್ ಮೂರ್ತಿಕಲೆಯಲ್ಲಿ ಪ್ರಥಮ ( ದಿ. ಜತ್ತಪ್ಪ ಗೌಡ ಹಾಗೂ ಶೀಮತಿ ಬೇಬಿ ರೇಖಾ ಯವರ ಪುತ್ರ)ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ತನ್ಮಯ್ ಎಸ್ ಆರ್. ವಿಜ್ಞಾನ ಪತ್ರವಾಚನದಲ್ಲಿ ದ್ವಿತೀಯ, ಶ್ರೀನಿಕಾ ರೈ ಸಿ ಎಚ್ ವೈದಿಕ ಗಣಿತ ರಸಪ್ರಶ್ನೆಯಲ್ಲಿ ದ್ವಿತೀಯ,ಯಜ್ನ ಜೆ ಎಸ್ ವೈದಿಕ ಗಣಿತ ರಸಪ್ರಶ್ನೆಯಲ್ಲಿ ದ್ವಿತೀಯ,ಅಖಿಲಾ S ವೈದಿಕ ಗಣಿತ ರಸಪ್ರಶ್ನೆಯಲ್ಲಿ ದ್ವಿತೀಯ ಹಾಗೂ 7ನೇಯ ಅದ್ವೈತ್ ಮೂರ್ತಿ ಕಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಇವರುಗಳಿಗೆ ಶಾಲಾ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್ ಹಾಗೂ ಶಾಲಾ ಮುಖ್ಯ್ಯೊಪಾಧ್ಯಯ ಪ್ರಸನ್ನ ಕೆ ಅಭಿನಂದನೆ ಸಲ್ಲಿಸಿದ್ದಾರೆ.