World Coconut Day : ಇಂದು ವಿಶ್ವ ತೆಂಗಿನಕಾಯಿ ದಿನ

0

ಭಾರತೀಯರ ಅಡುಗೆಯಲ್ಲಿ ತೆಂಗಿನಕಾಯಿಯ ಸ್ಥಾನ ಅಪ್ರತಿಮ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಬಹುತೇಕ ಪ್ರತಿಯೊಂದು ತಿನಿಸಿಗೂ ತೆಂಗಿನಕಾಯಿ ಅವಶ್ಯಕ. ಅಡುಗೆಯಷ್ಟೇ ಅಲ್ಲದೆ, ಆರೋಗ್ಯ ಮತ್ತು ಜೀವನೋಪಾಯಕ್ಕೂ ತೆಂಗು ಮಹತ್ವದ್ದಾಗಿದೆ. ಇಂದು ಸೆಪ್ಟೆಂಬರ್​ 2 ವಿಶ್ವ ತೆಂಗಿನಕಾಯಿ ದಿನ. ಈ ವರ್ಷದ ಆಚರಣೆಯ ವಿಷಯ ಏನೆಂದರೆ, ತೆಂಗಿನಕಾಯಿ ವಲಯದಲ್ಲಿ ನಾವೀನ್ಯತೆ ಹಾಗೂ ಬಲಪಡಿಸುವುದು ಮತ್ತು ಪುನರುಜ್ಜೀವನಗೊಳಿಸುವುದಾಗಿದೆ. ರಾಜ್ಯದ ಒಟ್ಟು ಕೃಷಿಯ ಸುಮಾರು ಶೇ 36ರಷ್ಟು ತೆಂಗಿನಕಾಯಿ ಬೆಳೆಯಲಾಗುತ್ತದೆ. ಭಾರತದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಹೆಚ್ಚು ತೆಂಗು ಬೆಳೆಯುತ್ತಾರೆ.

1969ರಲ್ಲಿ ಸ್ಥಾಪನೆಯಾದ ಏಷ್ಯನ್ ಅಂಡ್ ಪೆಸಿಫಿಕ್ ಕಮ್ಯೂನಿಟಿ (APCC) 2009ರಿಂದ ವಿಶ್ವ ತೆಂಗು ದಿನ ಆಚರಣೆಗೆ ಚಾಲನೆ ನೀಡಿದೆ. ಭಾರತ ಸೇರಿದಂತೆ ಮಲೇಷ್ಯಾ, ಇಂಡೋನೇಷ್ಯಾ, ಫಿಲಿಪ್ಪೀನ್ಸ್, ಥಾಯ್ಲೆಂಡ್, ವಿಯೆಟ್ನಾಂ ಮುಂತಾದ ದೇಶಗಳು ಇದರ ಸದಸ್ಯ ರಾಷ್ಟ್ರಗಳಾಗಿವೆ.

ತೆಂಗಿನಕಾಯಿ, ಎಳನೀರು ಮತ್ತು ತೆಂಗಿನೆಣ್ಣೆಯಿಂದ ಅನೇಕ ಪ್ರಯೋಜನಗಳಿವೆ. ಎಳನೀರು ಶೀತಲ, ಪೋಷಕ ಹಾಗೂ ದೇಹಕ್ಕೆ ಅಮೃತ ಎಂದು ಕರೆಯಲಾಗುತ್ತದೆ. ತೆಂಗಿನೆಣ್ಣೆ ಹೃದಯ ಮತ್ತು ಚರ್ಮಕ್ಕೆ ಒಳ್ಳೆಯದು, ಜೊತೆಗೆ ಕೂದಲಿನ ಬೆಳವಣಿಗೆಯಲ್ಲಿಯೂ ಸಹಕಾರಿ. ತೆಂಗಿನ ನಾರಿನಿಂದ ಹಗ್ಗ, ಮ್ಯಾಟ್, ಬ್ಯಾಗ್‌ಗಳಂತಹ ವಸ್ತುಗಳನ್ನು ತಯಾರಿಸಲಾಗುತ್ತದೆ. ಅಡುಗೆಯ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯ ಕಾಪಾಡುವ ಶಕ್ತಿ ಹೊಂದಿರುವ ತೆಂಗು ನಿಜವಾಗಿಯೂ ಸಂಪೂರ್ಣ ಸಸ್ಯ.

ವಿಶ್ವ ತೆಂಗಿನ ದಿನವು ಕೇವಲ ಒಂದು ಆಚರಣೆಯಲ್ಲ, ಇದು ರೈತರ ಶ್ರಮವನ್ನು ಗೌರವಿಸುವ ದಿನವೂ ಹೌದು. ತೆಂಗಿನ ಬೆಳೆ ಆರ್ಥಿಕತೆಗೆ ಕೊಡುಗೆ ನೀಡುವುದರ ಜೊತೆಗೆ, ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ತೆಂಗಿನಕಾಯಿ, ಎಳನೀರು ಹಾಗೂ ತೆಂಗಿನೆಣ್ಣೆಯಿಂದ ಹಲವು ರೀತಿಯ ಉಪಯೋಗಗಳಿವೆ. ಇದರಿಂದ ತಯಾರಿಸುವ ಖಾದ್ಯಗಳ ರುಚಿಯೂ ಅದ್ಭುತ. ಹೃದಯ, ಕರುಳು, ಚರ್ಮ ಸೇರಿದಂತೆ ಹಲವು ರೀತಿ ಆರೋಗ್ಯ ಸಮಸ್ಯೆಗಳಿಗೂ ತೆಂಗಿನಕಾಯಿ ಮದ್ದು. ಚರ್ಮದ ಕಾಂತಿ ಹೆಚ್ಚಿಸಲು, ಕೂದಲಿನ ಬೆಳವಣಿಗೆಗೆ ಇದು ಉತ್ತಮ. ಎಳನೀರು ಸೇವನೆಯು ಅಮೃತದಷ್ಟೇ ಪವಿತ್ರ ಎಂದೂ ಹೇಳಲಾಗುತ್ತದೆ. ತೆಂಗಿನನಾರಿನಿಂದ ಹಗ್ಗ, ಬ್ಯಾಗ್‌, ಮ್ಯಾಟ್‌ನಂತಹ ವಸ್ತುಗಳನ್ನು ತಯಾರಿಸುತ್ತಾರೆ. ಒಟ್ಟಾರೆ ತೆಂಗು ಎಲ್ಲದ್ದಕ್ಕೂ ಉಪಯೋಗಕ್ಕೆ ಬರುತ್ತದೆ. ಇಂಗು ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡುತ್ತೆ ಅನ್ನುವ ಗಾದೆ ಮಾತು ಕೂಡ ರೂಢಿಯಲ್ಲಿದೆ.

LEAVE A REPLY

Please enter your comment!
Please enter your name here