ಬೆಥನಿ ಐಟಿಐ ರಾಷ್ಟ್ರೀಯ ಕ್ರೀಡಾ ದಿನ

0

ಪುತ್ತೂರು: ರಾಷ್ಟ್ರೀಯತೆಗೆ ಚಿಂತನೆಯೊಂದಿಗೆ ಮೇಜರ್ ಧ್ಯಾನ್ ಚಂದ್ ರವರ ನೆನಪಿನಾರ್ಥ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಯಿತು.

ಸಂಸ್ಥೆಯ ಕ್ರೀಡಾ ವಿಭಾಗದ ಸಂತೋಷ್ ಪಿಂಟೋ ಮತ್ತು ವಿನ್ಸೆಂಟ್ ಸಿ. ಎಸ್ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಸುಮಾರು ಎರಡು ಕಿಲೋಮೀಟರ್ ದೂರದ ಮ್ಯಾರಥಾನ್ ಓಟ ಹಮ್ಮಿಕೊಳ್ಳಲಾಯಿತು.
ಈ ಓಟದಲ್ಲಿ ಸೃಜನ್ ಪ್ರಥಮ, ಲವನೀಶ ದ್ವಿತೀಯ, ಸ್ವಸ್ತಿಕ್‌ ಕೆ ಎಸ್ ತೃತೀಯ ಹಾಗೂ ಸುದರ್ಶನ್‌ ಎ ಆರ್ ನಾಲ್ಕನೇ ಸ್ಥಾನಗಳು ಬಂದವರಿಗೆ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನೆಲ್ಯಾಡಿ ವತಿಯಿಂದ ಬಹುಮಾನ ಹಾಗೂ ಸರ್ಟಿಫಿಕೇಟ್ ಗಳನ್ನು ವಿತರಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಸಜಿ ಕೆ ತೋಮಸ್, ಸೀನಿಯಾರ್ ಚೇಂಬರ್ ನೆಲ್ಯಾಡಿ ಲೀಜಿಯನ್ ಅಧ್ಯಕ್ಷರಾದ Snr ಪಿಪಿಎಫ್ ಪ್ರಕಾಶ್ ಕೆ ವೈ, ತರಬೇತಿ ಅಧಿಕಾರಿ ಜೋನ್ ಪಿ ಎಸ್, ಕಿರಿಯ ತರಬೇತಿ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here