ನಿಡ್ಪಳ್ಳಿ; ಪಾಣಾಜೆ ಗ್ರಾಮದ ದೇವಸ್ಯ ಎಂಬಲ್ಲಿ ಶ್ರೀಮತಿ ಮತ್ತು ಉದಯ ಕುಮಾರ್ ಎಂಬವರಿಗೆ ಅಟಲ್ ಜಿ ಜನ್ಮಶತಾಬ್ದಿ ಪ್ರಯುಕ್ತ ನವೀಕರಣ ಗೊಂಡ ಮನೆಯ ಹಸ್ತಾಂತರ ಕಾರ್ಯಕ್ರಮ ಸೆ.3ರಂದು ನಡೆಯಲಿದೆ. ಬೆಳಿಗ್ಗೆ ಗಣಹೋಮ ನಡೆದು ನಂತರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಪುತ್ತೂರು ತಾಲೂಕು ಬಾ.ಜ.ಪಾ ಮಾಜಿ ಅಧ್ಯಕ್ಷ ಮೊಗರೋಡಿ ಬಾಲಕೃಷ್ಣ ರೈ ದೀಪ ಬೆಳಗಿಸಲಿರುವರು.ತಾಲೂಕು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ರಾಮ ಭಟ್ ಪಾತಾಳ ಅಧ್ಯಕ್ಷತೆ ವಹಿಸಲಿರುವರು. ಪುತ್ತಿಲ ಪರಿವಾರದ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ದ.ಕ ಸಹಕಾರ ಭಾರತಿ ಕಾರ್ಯದರ್ಶಿ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಬಾ.ಜ.ಪಾ ಗ್ರಾಮಾಂತರ ಮಂಡಲ ತಾಲೂಕು ಸಮಿತಿ ಕಾರ್ಯದರ್ಶಿ ಉಮೇಶ್ ಕೋಡಿಬೈಲ್, ತಾಲೂಕು ಪುತ್ತಿಲ ಪರಿವಾರ ಸೇವಾ ಸೇವಾ ಟ್ರಸ್ಟ್ ಕಾರ್ಯದರ್ಶಿ ಪ್ರೇಮ್ ರಾಜ್ ಆರ್ಲಪದವು ಗೌರವ ಉಪಸ್ಥಿತಿಯಿರುವರು ಎಂದು ಸಂಘಟಕರು ತಿಳಿಸಿದ್ದಾರೆ.