ಪುತ್ತೂರು: ಆ.26ರಂದು ಪಿ.ಎಂ.ಶ್ರೀ ಸರಕಾರಿ ಹಿ.ಪ್ರಾ. ಶಾಲೆ ಉಚ್ಚಿಲಗುಡ್ಡೆ ಸೋಮೇಶ್ವರ ಇಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆ, ಪುತ್ತೂರು ಇಲ್ಲಿಯ 9ನೇ ತರಗತಿಯ ಸ್ಮೃತಿ ಕೆ ಉದ್ಯಮಿ ಪಲ್ಲತ್ತಾರು ಪ್ರವೀಣ್ ಪೂಜಾರಿ ಮತ್ತು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ದಂಪತಿಗಳ ಪುತ್ರಿ ಪ್ರಥಮ ಸ್ಥಾನದೊಂದಿಗೆ ಗೋಲ್ಡ್ ಮೆಡಲ್ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಕರಾಟೆ ಗುರುಗಳಾದ ನಾರಾಯಣ ಆಚಾರ್ಯ ಕಾವು ಇವರು ತರಬೇತಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಅಜಿತ್‌ರವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಹಾಗೂ ಪ್ರಭಾರ ಮುಖ್ಯೋಪಾಧ್ಯಾಯಿನಿಯಾದ ಗಾಯತ್ರಿ ಎಸ್ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.