ಪುತ್ತೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಯುನಿವರ್ಸಿಟಿ ಪರೀಕ್ಷೆಯ ಜೂನಿಯರ್ ವಿಭಾಗದಲ್ಲಿ ವಂದನಾ ಕೆ ಹೆಚ್ ಇವರು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿರುತ್ತಾರೆ. ಪುತ್ತೂರಿನ ಶ್ರೀ ಶಾರದಾ ಕಲಾಕೇಂದ್ರದ ವಿದ್ವಾನ್ ಸುದರ್ಶನ್ ಎಂ ಎಲ್ ಭಟ್ ರವರ ಶಿಷ್ಯೆಯಾಗಿರುವ ಇವರು ಕುದ್ಮಾರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ.
ಇವರು ಶಾಂತಿಗೋಡು ಗ್ರಾಮದ ಮುಂಡೋಡಿ ನಿವಾಸಿ ಜಗದೀಶ್ ಕೆ ಹೆಚ್ ಹಾಗೂ ಕುದ್ಮಾರು ಶಾಲಾ ಶಿಕ್ಷಕಿ ವೀಣಾ ದಂಪತಿಗಳ ಪುತ್ರಿಯಾಗಿರುತ್ತಾರೆ.