ಪುತ್ತೂರು: ಕಲ್ಲಡ್ಕದ ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ‘ವಿದ್ಯಾಭಾರತಿ ಗಣಿತ -ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವ’ ಸ್ಪರ್ಧೆಗಳಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿರುವರು.
ಬಾಲ ವಿಭಾಗದಲ್ಲಿ ಆದ್ಯ ಐ. ಆರ್ ದ್ವಿತೀಯ ಸ್ಥಾನ (ಸೆನ್ಸರ್ ಆಧಾರಿತ ಮಾದರಿ), ಜನ್ಯ ಪಿ. ಪ್ರಥಮ ಸ್ಥಾನ ( ಸೃಜನಾತ್ಮಕ ಮಾದರಿ ), ಸಾನ್ವಿಕ ತೃತೀಯ ಸ್ಥಾನ (ಪಳೆಯುಳಿಕೆ ಇಂಧನ ಆಧಾರಿತ ಮಾದರಿ ), ವಿಧಾತ್ರಿ ದ್ವಿತೀಯ ಸ್ಥಾನ ( ಕಥಾ ಕಥನ ಸ್ಪರ್ಧೆ), ಅಭಿಜ್ಞಾ ಗಣಿತ ಪ್ರಯೋಗದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಹಾಗೆಯೇ, ಕಿಶೋರ ವಿಭಾಗದಲ್ಲಿ 10ನೇ ತರಗತಿಯ ಶ್ಯಾಮ್ ಎಂ. ಎಚ್ ಗಣಿತ ಪ್ರಯೋಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.