ಪುತ್ತೂರು: ನೀರಾಜೆ ನೂರುಲ್ ಹುದಾ ಮಸ್ಜಿದ್ & ಮದ್ರಸದಲ್ಲಿ 𝟭𝟱𝟬𝟬 ನೇ ನಬಿ ದಿನಾಚರಣೆ ಪ್ರಯುಕ್ತ ಸೆ.5ರಂದು ಮೌಲೂದ್ ಪಾರಾಯಣ ಸ್ಥಳೀಯ ಉಸ್ತಾದರಾದ ಶೌಕತ್ ಅಲಿ ಅಸ್ಲಮಿ ಯವರ ನೇತೃತ್ವದಲ್ಲಿ ನೆರವೇರಿತು. ನೂರುಲ್ ಹುದಾ ಮಸ್ಜಿದ್ ಆಡಳಿತ ಸಮೀತಿಯ ಅಧ್ಯಕ್ಷ ಎನ್ ಸಿದ್ದೀಕ್ ದ್ವಜಾರೋಹಣ ನೆರವೇರಿಸಿದರು.
ಗಂಡಿಬಾಗಿಲಿನಿಂದ ಮಸೀದಿಯವರೆಗೆ ಮೀಲಾದ್ ಜಾಥಾ ನಡೆಯಿತು. ಗಂಡಿಬಾಗಿಲು ಮಸೀದಿಯ ಖತೀಬರಾದ ಸುಲ್ತಾನ್ ದಾರಿಮಿ ಪ್ರಾರ್ಥನೆಗೆ ನೇತೃತ್ವ ನೀಡಿದರು. ನೀರಾಜೆ ಮದ್ರಸ ಮುಅಲ್ಲಿಮ್ ಇಂಬ್ರಾನ್ ದಾರಿಮಿ, ಶರೀಫ್ ದಾರಿಮಿ ಸದರ್ ಮು ಅಲ್ಲಿಮ್ ಗಂಡಿಬಾಗಿಲು,ಬಷೀರ್ ದಾರಿಮಿ, QJM ಗಂಡಿಬಾಗಿಲು ಅಧ್ಯಕ್ಷ ಅಬ್ದುರಹ್ಮನ್ ,ಕೋಶಾಧಿಕಾರಿ ಹಸೈನಾರ್ ಹಾಜಿ ,ಆತೂರ್ ರೇಂಜ್ ಮದ್ರಸ ಮೆನೇಜ್ ಮೆಂಟ್ ಕಾರ್ಯದರ್ಶಿ ರಫೀಕ್ ಗಂಡಿಬಾಗಿಲು, NHM ನೀರಾಜೆ ಅಧ್ಯಕ್ಷ ಯೂಸುಫ್,NHM ನೀರಾಜೆ ಕೋಶಾಧಿಕಾರಿ ನಝಿರ್,NHM ನೀರಾಜೆ ಜೊತೆ ಕಾರ್ಯದರ್ಶಿ ಫುತ್ತು ಕುಂಜಿ , ನೀರಾಜೆ ಅನ್ಸಾರುಲ್ ಇಸ್ಲಾಂ ಯಂಗ್ ಮೆನ್ಸ್ ಅಧ್ಯಕ್ಷ ಸಿರಾಜ್ ,SKSSF ನೀರಾಜೆ ಶಾಖೆ ಅಧ್ಯಕ್ಷ ಹನೀಫ್ ,ಗಂಡಿಬಾಗಿಲು ಯಂಗ್ ಮೆನ್ಸ್ ಅಧ್ಯಕ್ಷ ಲತೀಫ್ ,ಗಂಡಿಬಾಗಿಲು ಶಾಖೆ SKSSF ಅಧ್ಯಕ್ಷ ಇಶ್ಹಾಕ್ ,ಹಾಗೂ ಗಂಡಿಬಾಗಿಲು ಜಮಾ ಅತ್ ಪದಾಧಿಕಾರಿಗಳು,ನೀರಾಜೆ NHM ಪದಾಧಿಕಾರಿಗಳು,ಭಾಗವಹಿಸಿದರು. ಮದ್ರಸ ವಿದ್ಯಾರ್ಥಿಗಳ ದಫ್ ಹಾಗೂ ಸ್ಕವ್ಟ್ ಪ್ಲವರ್ ಶೋ ಪ್ರದರ್ಶನ ನಡೆಯಿತು.SKSBV ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡರು.