ಸೆ.13 : ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ- ವಿದ್ಯಾನಿಧಿ ಧನಸಹಾಯ ವಿತರಣೆ-

0

ಪುತ್ತೂರು: ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ ಮತ್ತು ವಿದ್ಯಾನಿಧಿ ಧನಸಹಾಯ ವಿತರಣೆ ಸಮಾರಂಭವು ದರ್ಬೆ ಪ್ರಶಾಂತ್ ಮಹಲ್ ಸನ್ನಿಧಿ ಹಾಲ್ ನಲ್ಲಿ ಸೆ.13 ರಂದು ಜರಗಲಿದೆ ಎಂದು ಸಂಘದ ಅಧ್ಯಕ್ಷ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈಯವರ ಪರವಾಗಿ ಸಂಘದ ನಿರ್ದೇಶಕ ಅಶ್ವಿನ್ ಎಲ್ ಶೆಟ್ಟಿಯವರು ಸೆ.6 ರಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.


2024-25 ನೇ ಸಾಲಿನ ಅಂತ್ಯಕ್ಕೆ ಸಂಘದಲ್ಲಿ 8919 ಸದಸ್ಯರಿದ್ದು ಒಟ್ಟು 3.39 ಕೋಟಿ ರೂ. ಗಳಷ್ಟು ಪಾಲು ಬಂಡವಾಳವನ್ನು ಹೊಂದಿದೆ. ಸಂಘವು 150.95 ಕೋಟಿ ರೂ. ಠೇವಣಿಯನ್ನು ಹೊಂದಿಕೊಂಡು, 133.64 ಕೋಟಿ ರೂ. ಗಳಷ್ಟು ಸಾಲಗಳನ್ನು ವಿತರಿಸಿದೆ. ಸಂಘವು 2.84 ಕೋಟಿ ರೂ. ಗಳಷ್ಟು ಕ್ಷೇಮ ನಿಧಿ, 3.79 ಕೋಟಿ ರೂ. ಗಳಷ್ಟು ಇತರ ನಿಧಿ ಮತ್ತು 161.04 ಕೋಟಿಗಳಷ್ಟು ದುಡಿಯುವ ಬಂಡವಾಳವನ್ನು ಹೊಂದಿರುತ್ತದೆ. ಸಂಘವು ಸ್ಥಾಪನೆಗೊಂಡ ವರ್ಷದಿಂದ ತನ್ನ ಸದಸ್ಯರಿಗೆ ಡಿವಿಡೆಂಡ್ ನೀಡಿಕೊಂಡು ಬರುತ್ತಿರುವ ಮತ್ತು ಆಡಿಟ್ ವರ್ಗದಲ್ಲಿ ಸತತವಾಗಿ “ಎ” ತರಗತಿಯನ್ನು ಕಾಯ್ದುಕೊಂಡು ಬಂದಿರುವ ಏಕೈಕ ಸಂಘವಾಗಿರುತ್ತದೆ. ಕಳೆದ ವರ್ಷ ಶೇ.16% ಡಿವಿಡೆಂಡನ್ನು ನೀಡಿರುತ್ತೇವೆ ಎಂದು ಅಶ್ವಿನ್ ಎಲ್ ಶೆಟ್ಟಿ ತಿಳಿಸಿದರು.

ಶೂನ್ಯ ಬಡ್ಡಿದರದಲ್ಲಿ ರೂ. 2,೦೦,೦೦೦/-ದ ತನಕ ಸಾಲ
ಸಂಘದ ಪ್ರಗತಿ ಮತ್ತು ಸೇವೆಯನ್ನು ಪರಿಗಣಿಸಿ 2024-25 ನೇ ಸಾಲಿನಲ್ಲಿ ಸಂಘವು ತನ್ನ ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿಯನ್ನು ಸಾಧಿಸಿದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ವಾರ್ಷಿಕ ಮಹಾಸಭೆಯಲ್ಲಿ ಸಾಧನ ಪ್ರಷಸ್ತಿಯನ್ನು ನೀಡಿ ಗೌರವಿಸಿದೆ. ಸಂಘವು 6ನೇ ಸಲ ಈ ಪ್ರಶಸ್ತಿಗೆ ಭಾಜನವಾಗಿದೆ. ಕರ್ನಾಟಕ ಸರಕಾರವು ಅಖಿಲ ಭಾರತ ಸಹಕಾರಿ ಸಪ್ತಾಹದಲ್ಲಿ ಸಂಘಕ್ಕೆ 2 ಸಲ ಉತ್ತಮ ವಿವಿಧೋದ್ದೇಶ ಸಹಕಾರಿ ಸಂಘ ಪ್ರಶಸ್ತಿ ನೀಡಿ ಗೌರವಿಸಿದೆ. ಸಂಘದಲ್ಲಿ ಗ್ರಾಹಕರಿಗೆ ತ್ವರಿತ ಮತ್ತು ಪಾರದರ್ಶಕ ಸೇವೆಯನ್ನು ನೀಡುವ ಸಲುವಾಗಿ ನೆಫ್ಟ್, ಆರ್.ಟಿ.ಜಿ.ಎಸ್ ಸೌಲಭ್ಯ, ಎಸ್.ಎಂ.ಎಸ್ ಸೌಲಭ್ಯಗಳನ್ನು ಒದಗಿಸಲಾಗಿದೆ ಹಾಗೂ ಸದಸ್ಯರಿಗೆ ಸೋಲಾರ್ ವಾಟರ್ ಹೀಟರ್ ಮತ್ತು ಸೋಲಾರ್ ಲೈಟ್ ಅಳವಡಿಸಲು ಶೂನ್ಯ ಬಡ್ಡಿದರದಲ್ಲಿ ರೂ. 2,೦೦,೦೦೦/-ದ ತನಕ ಸಾಲವನ್ನು ವಿತರಿಸುತ್ತೇವೆ ಎಂದು ಅಶ್ವಿನ್ ಎಲ್ ಶೆಟ್ಟಿ ತಿಳಿಸಿದರು.

ಸಂಘದ ನಿರ್ದೇಶಕ ಜೈರಾಜ್ ಭಂಡಾರಿ ನೊಣಾಲು-ಡಿಂಬ್ರಿರವರು ಮಾತನಾಡಿ, ಸಂಘವು ತನ್ನ ಸಾಮಾಜಿಕ ಕಾರ್ಯದ ಮೂಲಕ ಶಾಖೆಗಳ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಗಳಲ್ಲಿ 5 ರಿಂದ 10 ನೇ ತರಗತಿಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ತನ್ನ ಧರ್ಮಾರ್ಥ ಮತ್ತು ವಿದ್ಯಾಸಂಸ್ಥೆ ನಿಧಿಯಿಂದ ಧನಸಹಾಯವನ್ನು ಮಹಾಸಭೆಯ ದಿನದಂದು ನೀಡಿಕೊಂಡು ಬರುತ್ತಿದ್ದು, ಈ ವರೆಗೆ ಒಟ್ಟು ರೂ.26,29,೦೦೦/- ಮೊತ್ತವನ್ನು ಒಟ್ಟು 1295 ವಿದ್ಯಾರ್ಥಿಗಳಿಗೆ ವಿತರಿಸಿರುತ್ತೇವೆ. ಮಾತ್ರವಲ್ಲದೆ ಹಲವಾರು ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ಕೂಡ ನೀಡಿರುತ್ತೇವೆ. ಸೆ.13 ರಂದು ನಡೆಯುವ ಸಂಘದ ಮಹಾಸಭೆಯ ಬಳಿಕ ನಡೆಯುವ ಸಮಾರಂಭದಲ್ಲಿ ಈ ವರ್ಷ 7 ಮತ್ತು 8ನೇ ತರಗತಿಯಲ್ಲಿ ಕಲಿಯುತ್ತಿರುವ 250 ಮಕ್ಕಳಿಗೆ ತಲಾ 2,೦೦೦/- ರಂತೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುವುದು ಎಂದು ತಿಳಿಸಿದರು. ಮಂಗಳೂರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ಅಧ್ಯಕ್ಷ ಕೆ ಜೈರಾಜ್ ಬಿ ರೈಯವರು ವಿದ್ಯಾನಿಧಿ-ಧನಸಹಾಯ ವಿತರಣೆ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಶಶಿಧರ್ ಜಿ ಎಸ್, ಕೆಯ್ಯೂರು ಶ್ರೀ ಮಹಿಷಾ ಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ. ಜಯರಾಮ ರೈ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸಂಘದ ಉಪಾಧ್ಯಕ್ಷ ಎನ್. ಸುಂದರ್ ರೈ ಸವಣೂರು, ಮಹಾಪ್ರಬಂಧಕ ವಸಂತ ಜಾಲಾಡಿ, ಸಹಾಯಕ ಮಹಾಪ್ರಬಂಧಕ ಸುನಾದ್ ರಾಜ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

829.88 ಕೋಟಿ ರೂ. ವ್ಯವಹಾರ, 2.01 ಕೋಟಿ ರೂ. ಲಾಭ
ಪುತ್ತೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸಂಘವು 23 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಮತ್ತು ಕಡಬ ತಾಲೂಕಿನಲ್ಲಿರುವ 15 ಶಾಖೆಗಳ ಮೂಲಕ ನೀಡಿಕೊಂಡು ಬರುತ್ತಿದ್ದು, 2024-25 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸಂಘವು 829.88 ಕೋಟಿ ರೂ. ಗಳ ದಾಖಲೆಯ ವ್ಯವಹಾರವನ್ನು ನಡೆಸಿ 2.01 ಕೋಟಿ ರೂ.ಗಳಷ್ಟು ಲಾಭವನ್ನು ಗಳಿಸಿರುತ್ತದೆ. ಸಂಘದ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡದ ನಿರ್ಮಾಣವು ಪ್ರಗತಿಯಲ್ಲಿದೆ, ಸಂಘಕ್ಕೆ 25 ವರ್ಷ ಪೂರೈಸುವುದರೊಳಗೆ ಕಟ್ಟಡ ನಿರ್ಮಾಣದ ಕೆಲಸವನ್ನು ಪೂರ್ತಿಗೊಳಿಸಿ ಲೋಕಾರ್ಪಣೆಯನ್ನು ಮಾಡಲಾಗುವುದು. ಮಂಗಳೂರಿನ ಪಾಂಡೇಶ್ವರದಲ್ಲಿ ಮತ್ತು ಪುತ್ತೂರಿನ ಈಶ್ವರಮಂಗಲದಲ್ಲಿ ಸಂಘದ 16ನೇ ಮತ್ತು 17ನೇ ಶಾಖೆಗಳನ್ನು ಅತೀ ಶೀಘ್ರದಲ್ಲಿ ತೆರೆಯಲಾಗುವುದು
-ಅಶ್ವಿನ್ ಎಲ್ ಶೆಟ್ಟಿ,ನಿರ್ದೇಶಕರು ಆದರ್ಶ ವಿವಿಧೋದ್ದೇಶ ಸಹಕಾರ ಸಂಘ

LEAVE A REPLY

Please enter your comment!
Please enter your name here