ಪುತ್ತೂರು: ನವೋದಯ ಪ್ರೌಢಶಾಲಾ ಸಭಾಂಗಣದಲ್ಲಿ ಹದಿಹರೆಯದ ಕಿಶೋರಿಯರಿಗೆ ಆಪ್ತ ಸಮಾಲೋಚನಾ ಕಾರ್ಯಕ್ರಮವು ಸೆ.3ರಂದು ನಡೆಯಿತು. ಶಾಲಾ ಹಿರಿಯ ಶಿಕ್ಷಕಿ ಸುಮಂಗಲಾ ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಪುತ್ತೂರು ತಾಲೂಕು ಆರೋಗ್ಯ ಕೇಂದ್ರದ ಸ್ನೇಹಾ ಕ್ಲಿನಿಕ್ ನ ಆಪ್ತ ಸಮಾಲೋಚಕಿ ಸುಶ್ಮಿತಾ, ಹದಿಹರೆಯದ ಕಿಶೋರಿಯರಿಗೆ, ಹದಿಹರೆಯದ ಆರೋಗ್ಯ ಋತುಚಕ್ರದ ಆರೋಗ್ಯ ಶುಚಿತ್ವ, ಕಲಿಕಾ ಮಹತ್ವ ಹಾಗೂ ಪೋಕ್ಸೋ ಕಾಯ್ದೆಗಳು,WIPS, ಪೌಷ್ಟಿಕ ಆಹಾರದ ಸೇವನೆ ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ ಹಾಗೂ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ವಿದ್ಯಾರ್ಥಿನಿಯರು ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶಿಕ್ಷಕಿಯರಾದ ಶೋಭಾ ಬಿ, ಗೌತಮಿ.ಎಂ.ಬಿ ಆಶಾ ಕಾರ್ಯಕರ್ತೆ ಭವಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕರಾದ ರಾಧಾಕೃಷ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಿಕ್ಷಕಿ ಭುವನೇಶ್ವರಿ.ಎಂ ಇವರು ವಂದಿಸಿದರು.