ಪುತ್ತೂರು : ತೆಂಕಿಲದ ‘ನರೇಂದ್ರ’ ಪದವಿಪೂರ್ವ ಕಾಲೇಜಿನಲ್ಲಿ ನಡೆದ ‘ಬಿಜ್‌ಬ್ಲೂಮ್’ ಅಂತರ ಶಾಲಾ ಸ್ಪರ್ಧೆಗಳಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆಗೈದಿರುವರು.
10ನೇ ತರಗತಿಯ ವಿದ್ಯಾರ್ಥಿನಿಯರಾದ ಧನ್ಯಶ್ರೀ ಮತ್ತು ಕೃತಿ ತಂಡ ತಯಾರಿಸಿದ ವಿಜ್ಞಾನ ಮಾದರಿಗೆ ಪ್ರಥಮ ಸ್ಥಾನ , 9ನೇ ತರಗತಿಯ ವಿದ್ಯಾರ್ಥಿಗಳಾದ ಅಚಿಂತ್ಯ ಮತ್ತು ಪ್ರಥಮ್ ತಂಡವು ಬಿಸಿನೆಸ್ ಕ್ವಿಜ್ ನಲ್ಲಿ ಪ್ರಥಮ ಸ್ಥಾನ, ಕವಿನ್ ಮತ್ತು ಆರುಷ್ ತಂಡ ದ್ವಿತೀಯ ಸ್ಥಾನ ಹಾಗೂ ಶ್ರೇಯಸ್ ಮತ್ತು ತುಷಾರ್ ತಂಡ ಪೋಸ್ಟರ್ ತಯಾರಿಕೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.