ಪುತ್ತೂರು: ಕೃಷಿಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.5ರಂದು ಸಂಜೆ ಕಡಬ ತಾಲೂಕಿನ ಪೆರಾಬೆ ಗ್ರಾಮದ ಮಾಯಿಲ್ಗ ಎಂಬಲ್ಲಿ ನಡೆದಿದೆ.
ಮಾಯಿಲ್ಗ ನಿವಾಸಿ ಸಂಜೀವ ಪೂಜಾರಿ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಇವರು ಕೃಷಿ ಹಾಗೂ ಆಲಂಕಾರು ಪೇಟೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು. ಸೆ.5ರಂದು ಬೆಳಿಗ್ಗೆ ಆಲಂಕಾರು ಪೇಟೆಗೆ ಹೋಗಿದ್ದ ಸಂಜೀವ ಪೂಜಾರಿಯವರು ಮಧ್ಯಾಹ್ನ ಮನೆಗೆ ಬರುತ್ತಿದ್ದ ವೇಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅವರ ಪುತ್ರ ಹಾಗೂ ಪತ್ನಿ ಸ್ವಲ್ಪ ಕೆಲಸಕ್ಕೆ ಸೇರಿ ಎಂದರೂ ಮಾತನಾಡದೇ ಮನೆಗೆ ಹೋಗಿದ್ದರು. ಮಧ್ಯಾಹ್ನ 3 ಗಂಟೆಗೆ ಪುತ್ರ ಹಾಗೂ ಪತ್ನಿ ಕೆಲಸ ಮುಗಿಸಿ ಮನೆಗೆ ಹೋದಾಗ ಸಂಜೀವ ಪೂಜಾರಿಯವರು ಮನೆಯ ಬದಿಯ ಹಾಲ್ನಲ್ಲಿ ಕಬ್ಬಿಣದ ರಾಡ್ಗೆ ನೇಣು ಬಿಗಿದುಕೊಂಡು ನೇತಾಡುವ ಸ್ಥಿತಿಯಲ್ಲಿದ್ದರು.
ಅವರನ್ನು ಹಗ್ಗದಿಂದ ಕೆಳಗಿಳಿಸಿ ಕಾರಿನಲ್ಲಿ ಆಲಂಕಾರಿನ ಕ್ಲಿನಿಕ್ವೊಂದಕ್ಕೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯಾಧಿಕಾರಿಯವರು ಪರಿಶೀಲಿಸಿ, ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗೆ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿ ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಈ ಬಗ್ಗೆ ಮೃತ ಸಂಜೀವ ಪೂಜಾರಿಯವರ ಪುತ್ರ ಚಂದನ್ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.