ಪುಣಚ: ಏಸುಕ್ರಿಸ್ತರ ತಾಯಿ ಮೇರಿಮಾತೆಯ ಜನ್ಮದಿನವನ್ನು ಸಾರುವ ಕನ್ಯಾಮರಿಯಮ್ಮನವರ ಜನ್ಮದಿನ (ಮೋಂತಿಫೆಸ್ತ್) ಮತ್ತು ತೆನೆಹಬ್ಬವನ್ನು ಪುಣಚ ಮನೆಲ ಕ್ರಿಸ್ತರಾಜ ಚರ್ಚ್’ನಲ್ಲಿ ಸೆ.8ರಂದು ಆಚರಿಸಲಾಯಿತು.
ಮನೆಲ ಚರ್ಚನ ಧರ್ಮಗುರು ವಂದನೀಯ ಸ್ಯಾನಿಸ್ಲಾಸ್ ರೊಡ್ರಿಗಸ್ ಬಲಿಪೂಜೆ ನೆರವೇರಿಸಿ ಊರಿನ ಸಮಸ್ತರಿಗಾಗಿ ಪ್ರಾರ್ಥಿಸಿದರು. ಬಲಿಪೂಜೆಯ ಬಳಿಕ ಸಂಪ್ರದಾಯದಂತೆ ತೆನೆ ಮತ್ತು ಕಬ್ಬನ್ನು ಭಕ್ತರಿಗೆ ವಿತರಿಸಲಾಯಿತು.