ಪ್ರಿಯದರ್ಶಿನಿಯಲ್ಲಿ ಎಂಎಲ್‌ಸಿ ಕಿಶೋರ್ ಕುಮಾರ್ ರವರಿಂದ ಶಾಶ್ವತ ಕುಡಿಯುವ‌ ನೀರಿನ ಟ್ಯಾಂಕ್ ನ ಶಂಕುಸ್ಥಾಪನೆ

0


ಪುತ್ತೂರು: ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬೆಟ್ಟಂಪಾಡಿಯಲ್ಲಿ ಕರ್ನಾಟಕ ಸರಕಾರದ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಇವರ ಅನುದಾನದಲ್ಲಿ ಶಾಲಾ ಬೆಳ್ಳಿ ಹಬ್ಬದ ನೆನಪಿಗೋಸ್ಕರ ಶಾಶ್ವತ ಕುಡಿಯುವ ನೀರಿನ ಟ್ಯಾಂಕ್ ನ ಶಂಕುಸ್ಥಾಪನೆಯು ನಡೆಯಿತು.

ಶಂಕುಸ್ಥಾಪನೆ ನೆರವೇರಿಸಿದ ವಿಧಾನಸಭಾ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ಮೀಸಲಾದ ಎರಡು ಕೋಟಿ ಅನುದಾನದಲ್ಲಿ 8 ಲಕ್ಷವನ್ನು ಪ್ರಿಯದರ್ಶಿನಿ ವಿದ್ಯಾಸಂಸ್ಥೆಗೆ ಪ್ರೀತಿಯಿಂದ ನೀಡುತ್ತಿದ್ದೇನೆ. ಇಲ್ಲಿನ ವಿದ್ಯಾರ್ಥಿಗಳು ಅದೃಷ್ಟವಂತರು. ಗ್ರಾಮೀಣ ಪ್ರದೇಶದಲ್ಲಿ ಪ್ರಭಾವಿ ಶಿಕ್ಷಕರ ಒಡನಾಟದಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದೀರಿ ಎಂದರು. ಜೀವನದ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಬೆಂಕಿಯ ಹಾಗೆ ಬದುಕಿ ತೋರಿಸಿ. ನಮ್ಮ ದೇಶದ ನಾಯಕ ನಮಗೆ ಮಾದರಿಯಾಗಿದ್ದಾರೆ. ಬಲಿಷ್ಠ ಭಾರತ ಕಟ್ಟುವಲ್ಲಿ ನಾವೆಲ್ಲ ಕೈಜೋಡಿಸೋಣ ಎಂದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ರಂಗನಾಥ ರೈ ಗುತ್ತು ಇವರು ಪ್ರಿಯದರ್ಶಿನಿಯ ಇತಿಹಾಸದ ಪುಟದಲ್ಲಿ ಬರೆದಿರುವ ದಿನವಿದು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸುವ ಹಿತೈಷಿಗಳಿಗೆ ನಾನು ಆಭಾರಿಯಾಗಿದ್ದೇನೆ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಪ್ರಕಾಶ್ ರೈ ಬೈಲಾಡಿ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ವಿಶ್ವನಾಥ ನಾಯ್ಕ ಕೂವೆಂಜಾ, ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆಯ ಆಡಳಿತ ಸಮಿತಿಯ ಸದಸ್ಯರಾದ ಜನಾರ್ಧನ ಪೂಜಾರಿ ಪದಡ್ಕ, ಆರ್ ಸಿ ನಾರಾಯಣ ರೆಂಜ, ದಯಾನಂದ ರೈ ಉಜ್ರೆಮಾರ್, ಜಗನ್ನಾಥ ರೈ ಕೊಮ್ಮಂಡ, ವಿನೋದ್ ರೈ ಗುತ್ತು, ಮಾಧವ ನಾಯಕ್ ಸುಳ್ಯ ಪದವು ಉಪಸ್ಥಿತರಿದ್ದರು.

ಮುಖ್ಯಗುರು ರಾಜೇಶ್ ಎನ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ವೃಷ್ಟಿ ರೈ, ಪ್ರಣಿತ ಹಾಗೂ ಅನನ್ಯ ಪ್ರಾರ್ಥಿಸಿದರು. ಸಹ ಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here