ಕಾಂಗ್ರೆಸ್ ಸರಕಾರದ ಜನಪರ ಆಡಳಿತ ಜನರನ್ನು ಪಕ್ಷದತ್ತ ಆಕರ್ಷಿಸುತ್ತಿದೆ; ಶಾಸಕ ಅಶೋಕ್ ರೈ
ಪುತ್ತೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸರಕಾರದ ಗ್ಯಾರಂಟಿ ಯೋಜನೆ ಹಾಗೂ ಇನ್ನಿತರ ಅಭಿವೃದ್ದಿ ಕಾರ್ಯಗಳು ಜನರ ಮೆಲೆ ವಿಶ್ವಾಸವನ್ನು ಹೆಚ್ಚಿಸಿದ್ದು ಈ ಕಾರಣಕ್ಕೆ ಅನ್ಯ ಪಕ್ಷಗಳಿಂದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಪುತ್ತೂರು ಶಾಸಕರಾದ ಅಶೋಕ್ ರ‍್ಯ ಹೇಳಿದರು.
ಅವರು ಸೋಮವಾರದಂದು ಆರ್ಯಾಪು ಗ್ರಾಮದ ಸುಮಾರು 30 ಮಂದಿ ಬಿಜೆಪಿ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.
ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಇಂದು ಪ್ರತೀ ಮನೆಯನ್ನು ಬೆಳಗಿಸಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆಗಳು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿದೆ. ಕಾಂಗ್ರೆಸ್ ಮಾತ್ರ ಬಡವರ ಪರ ಎಂಬುದು ಈಗ ಸಾಭೀತಾಗುತ್ತಿದೆ. ಬಿಜೆಪಿಯವರ ಸುಳ್ಳು ಭರವಸೆಗಳನ್ನು ನಂಬಿ ಮೋಸ ಹೋದ ನೂರಾರು ಕಾರ್ಯಕರ್ತರು ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಅವರು ಇದ್ದ ಪಕ್ಷದ ಪರವಾಗಿ ಅವರು ಅನೇಕ ವರ್ಷಗಳಿಂದ ಕೆಲಸ ಮಾಡಿದ್ದರೂ ಅವರಿಗೆ ರಸ್ತೆಯನ್ನು ಕೂಡಾ ಮಾಡಲಾಗಿಲ್ಲ ಇದು ಅತ್ಯಂತ ನೋವಿನ ಸಂಗತಿಯಾಗಿದೆ. ಯಾವುದೇ ಒತ್ತಡವಿಲ್ಲದೆ, ಬೇಡಿಕೆ ಮುಂದಿಡದೆ ಆರ್ಯಾಪು ಗ್ರಾಮದ ಬಿಜೆಪಿ ಕಾರ್ಯಕರ್ತರು ಪಕ್ಷಕ್ಕೆ ಸೇರಿಕೊಂಡಿದ್ದಾರೆ ಇದು ಪುತ್ತೂರಿನ ಮಟ್ಟಿಗೆ ಅತ್ಯಂತ ಸಂತಸದ ಕಾರ್ಯವಾಗಿದೆ. ಪಕ್ಷಕ್ಕೆ ಸೇರಿದವರನ್ನು , ಇನ್ನು ಸೇರಲಿರುವವರನ್ನು ಅತ್ಯಂತ ಗೌರವದಿಂದ ನೋಡಿಕೊಳ್ಳಲಾಗುವುದು ಎಂದು ಶಾಸಕರು ಹೇಳಿದರು.
ಪುತ್ತೂರಿನಲ್ಲಿ ಪಕ್ಷ ಇನ್ನಷ್ಟು ಬಲಿಷ್ಠ: ಕೆ ಪಿ ಆಳ್ವ
ಪುತ್ತೂರಿನಲ್ಲಿ ಕಾಂಗ್ರೆಸ್ ಬಲಿಷ್ಟವಾಗುತ್ತಿದೆ,ಬಿಜೆಪಿ ಸುಳ್ಳಿನ ವಿರುದ್ದ ಪುತ್ತೂರು, ವಿಟ್ಲ, ಹಾಗೂ ಉಪ್ಪಿನಂಗಡಿ ಬ್ಲಾಕ್ ವ್ಯಾಪ್ತಿಯಲ್ಲಿ ನಡೆದ ಜನಜಾಗೃತಿ ಸಭೆಯ ಬಳಿಕ ಪಕ್ಷಕ್ಕೆ ನೂರಾರು ಮಂದಿ ಸೇರ್ಪಡೆಯಾಗಿದ್ದಾರೆ, ಪುತ್ತೂರಿನಲ್ಲಿ ಶಾಸಕ ಅಶೋಕ್ ರೈ ಅವರ ಅಭಿವೃದ್ದಿ ಕೆಲಸಗಳು ಅನ್ಯ ಪಕ್ಷದಿಂದ ಕಾರ್ಯಕರ್ತರು ಕಾಂಗ್ರೆಸ್ ನತ್ತ ವಾಲುವಂತೆ ಮಾಡುತ್ತಿದೆ. ಪುತ್ತೂರು ದಿನೇ ದಿನೇ ಅಭಿವೃದ್ದಿಯಾಗುತ್ತಿದೆ. ಪಕ್ಷಾತೀತವಾಗಿ ಒಬ್ಬ ಶಾಸಕ ಮಾಡಬೇಕಾದ ಕೆಲಸವನ್ನು ಅಶೋಕ್ ರೈ ಅವರು ಮಾಡುತ್ತಿದ್ದಾರೆ ಎಂಬುದಕ್ಕೆ ಇಲ್ಲಿನ ಮತದಾರ ಗಮನಿಸಿದ್ದಾನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ನಾಯಕರು, ಕಾರ್ಯಕತ್ರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.
ಇನ್ನೂ ಸೇರಲಿದ್ದಾರೆ: ಗಿರೀಶ್ ರೈ
ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಗಿರೀಶ್ ರೈ ಮಾತನಾಡಿ, ಕಳೆದ ಎರಡು ತಿಂಗಳ ನಡುವೆ ಸುಮಾರು 55 ಮಂದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಶಾಸಕರ ಕಾರ್ಯವೈಖರಿಯನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಮುಂದೆ ಇನ್ನೂ ಹಲವು ಮಂದಿ ಪಕ್ಷಕ್ಕೆ ಸೇರಲಿದ್ದಾರೆ. ಆರ್ಯಾಪು ಗ್ರಾಮದ ಅಭಿವೃದ್ದಿಗೆ ಶಾಸಕರು ಸಾಕಷ್ಟು ಅನುದಾನವನ್ನು ನೀಡಿದ್ದು ಮುಂದೆಯೂ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಶೀನಪ್ಪ ಮೊಗೇರ, ಕೇಶವ ಮೊಗೇರ, ಹರೀಶ್ , ಸುಧಾಕರ ಮೊಗೇರ, ಸತೀಶ್ ನಾಯ್ಕ್, ಹರೀಶ್ ನಾಯ್ಕ್, ರೋಹಿತ್ ನಾಯ್ಕ, ಪ್ರಶಾಂತ್ ನಾಯ್ಕ್, ಶ್ರೀನಿವಾಸ್ ನಾಯ್ಕ್, ಲೋಹಿತ್ ನಾಯಕ್, ರಮೇಶ್ ನಾಯ್ಕ್, ತಾರನಾಥ ನಾಯ್ಕ್, ಪರಮೇಶ್ವರ್ ನಾಯ್ಕ, ಮಾಲತಿ ನಾಯ್ಕ್, ಕುಸುಮಾವತಿ ನಾಯ್ಕ್, ವಿದ್ಯಾನಾಯ್ಕ್, ಭವ್ಯಾ, ಅಮಿತಾ, ಗೀತಾ ಚೆನ್ನಪ್ಪ ಮರಿಕೆ, ಚೆನ್ನಪ್ಪ ಮರಿಕೆ,ವಸಂತ ಪುಜಾರಿ, ಕೃಷ್ಣಪ್ಪ ಮೂಲ್ಯ, ಜಾನಕಿ ಕೃಷ್ಣಪ್ಪ ಮೂಲ್ಯ, ಚಂಧ್ರ ಪೂಜಾರಿ, ಕೊರಗಪ್ಪ ಪೂಜಾರಿ, ಸುಂದರ ಗೌಡ, ಚಂದ್ರ, ಪುರಂದರ್ ಗೌಡ ,ರಾಮಣ್ಣ ಗೌಡ ಸೇರಿದಂತೆ ಹಲವು ಮಂದಿ ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಪ್ರಮುಖರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆಪಕ್ಷದ ಮುಖಂಡರಾದ ಕೇಶವ ಸುವರ್ಣ, ಶಿವಪ್ರಸಾದ್, ಉದಯ ರೈ, ಪೂರ್ಣಿಮಾ ರೈ, ಸಂತೋಷ್, ಪವಿತ್ರ ರೈ, ಎಸ್ ಸಿ ಘಟಕದ ಅಧ್ಯಕ್ಷ ಬಾಬು ಮರಿಕೆ, ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯಕ್, ಸಲಾಂ ಸಂಪ್ಯ, ಹಾರಿಸ್ ಸಂಪ್ಯ, ರಕ್ಷಿತ್ ರೈ ಮುಗೇರು, ಸಾಹಿರಾ ಬಾನು ಬನ್ನೂರು ಮೊದಲಾದವರು ಉಪಸ್ಥಿತರಿದ್ದರು., ಬ್ಲಾಕ್ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಸ್ವಾಗತಿಸಿ ವಂದಿಸಿದರು.