ಕಾಣಿಯೂರು : ವಿದ್ಯಾರ್ಥಿನಿಗೆ ಕಿರುಕುಳ ಆರೋಪ – ಯುವಕನ ವಿರುದ್ಧ ದೂರು

0

ಕಾಣಿಯೂರು : ಕಾಣಿಯೂರು ಸಮೀಪದ ಪುಣ್ಚತ್ತಾರು ಎಂಬಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೊಬ್ಬನ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ವರದಿಯಾಗಿದೆ.


ಕೆಲದಿನಗಳ ಹಿಂದೆ ಕಾಲೇಜು ವಿದ್ಯಾರ್ಥಿನಿ ರಸ್ತೆ ಬದಿ ನಡೆದುಕೊಂಡು ಮನೆಗೆ ಹೋಗುವಾಗ ಯುವಕ ಬೈಕಿನಲ್ಲಿ ಬಂದು ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವುದಾಗಿ ತಿಳಿದುಬಂದಿದೆ. ಬಳಿಕ ವಿದ್ಯಾರ್ಥಿನಿ ಮನೆಯವರ ಜತೆಗೆ ಬೆಳ್ಳಾರೆಗೆ ಬಂದು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದರು. ಆದರೆ ಯುವಕ ಯಾರೆಂದು ವಿದ್ಯಾರ್ಥಿನಿಗೆ ಗುರುತು ಪರಿಚಯವಿರಲಿಲ್ಲ. ಘಟನೆ ನಡೆದ ಸ್ಥಳದ ಸುತ್ತಮುತ್ತದ ಸುಮಾರು 15 ಸಿ.ಸಿ. ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ವಿದ್ಯಾರ್ಥಿನಿ ಹೇಳುವ ಸಮಯದಲ್ಲಿ ಹೋದ ಬೈಕ್ ಯಾವುದೆಂದು ಪತ್ತೆಹಚ್ಚಲಾಯಿತು. ಬೈಕ್‌ನ ನಂಬರ್ ಆಧಾರದಲ್ಲಿ ಪೆರ್ಲಂಪಾಡಿಯ ಉದಯ ಎಂಬಾತನು ವಿಚಾರಣೆಗೊಳಪಡಿಸಿದಾಗ ಆತನೇ ಕೃತ್ಯ ಮಾಡಿದವನೆಂದು ಖಚಿತ ಪಟ್ಟಿದ್ದು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ಬೆಳ್ಳಾರೆ ಠಾಣಾ ಎಸೈ ಡಿ.ಎನ್.ಈರಯ್ಯ ಅವರ ನೇತೃತ್ವದಲ್ಲಿ ಸತತ ಕಾರ್ಯಾಚರಣೆಯ ಮೂಲಕ ಪೊಲೀಸರು ಪ್ರಕರಣ ಬೇಽಸಿದ್ದು, ಸಾರ್ವಜನಿಕರ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ

LEAVE A REPLY

Please enter your comment!
Please enter your name here