ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳು ಗಣಿತ – ವಿಜ್ಞಾನ ಮೇಳದಲ್ಲಿ ಕ್ಷೇತ್ರೀಯ ಮಟ್ಟಕ್ಕೆಆಯ್ಕೆ

0

ಪುತ್ತೂರು: ಅಖಿಲ ಭಾರತೀಯ ವಿದ್ಯಾಭಾರತಿ ಶಿಕ್ಷಾ ಸಂಸ್ಥಾನಂ ನ ವತಿಯಿಂದ ಪ್ರಾಂತ ಮಟ್ಟದ ಗಣಿತ- ವಿಜ್ಞಾನ ಮೇಳ 2025-26, ಸೆ.5 ರಿಂದ 7ರವರೆಗೆ ಮೈಸೂರಿನ ಲಕ್ಷ್ಮಿಪುರಂನಲ್ಲಿರುವ  ಡಾ. ಗೋಪಾಲ  ಸ್ವಾಮಿ ಶಿಶುವಿಹಾರ  ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಿತು. ಈ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳು ಭಾಗವಹಿಸಿ ಕ್ಷೇತ್ರೀಯ ಮಟ್ಟಕ್ಕೆ  ಆಯ್ಕೆಯಾಗಿರುತ್ತಾರೆ.

ಬಾಲವರ್ಗದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ 8ನೇ ತರಗತಿಯ ಸಾನ್ವಿ ಡಿ(ದೀಪಕ್ ಮತ್ತು ಯಶೋಧ ಕೆ ದಂಪತಿ ಪುತ್ರಿ) ‘ಪಳೆಯುಳಿಕೆ ಇಂಧನಗಳು’ ಎಂಬ ವಿಷಯದಲ್ಲಿ ದ್ವಿತೀಯ ಸ್ಥಾನ ಹಾಗೂ ಕಿಶೋರ ವರ್ಗದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ 9ನೇ ತರಗತಿಯ ಸಮೃಧ್ಧ್ ಆರ್ ಶೆಟ್ಟಿ (ರಾಮಚಂದ್ರ ಮತ್ತು ಶೋಭಾ ದಂಪತಿ ಪುತ್ರ) ‘ವಿದ್ಯುತ್ ಕಾಂತೀಯ  ಪರಿಣಾಮಗಳು’ ಎಂಬ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದು ಆಂಧ್ರಪ್ರದೇಶದಲ್ಲಿ  ನಡೆಯುವ ಕ್ಷೇತ್ರೀಯ ಮಟ್ಟದ ಸ್ಪರ್ಧೆಗೆ  ಆಯ್ಕೆಯಾಗಿರುತ್ತಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here