ಪುತ್ತೂರು: ಕಳೆದ 55 ವರ್ಷಗಳಿಂದ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ನ್ಯಾಶನಲ್ ಸ್ಟೋರ್ ಎಂಬ ದಿನಸಿ ಅಂಗಡಿ ಮತ್ತು ಬುಕ್ ಸ್ಟಾಲ್ ನಡೆಸುತ್ತಿದ್ದ ಅಬ್ಬಾಸ್ ಗೂನಡ್ಕ, ತಮ್ಮ ವೃತ್ತಿಯಿಂದ ನಿವೃತ್ತಿ ಪಡೆದಿದ್ದು, ಇತ್ತೀಚೆಗೆ ಪುತ್ತೂರಿನ ಮಹಾವೀರ ಆಸ್ಪತ್ರೆ ಭೇಟಿ ನೀಡಿದ ವೇಳೆ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ.ಸುರೇಶ್ ಪುತ್ತೂರಾಯ ಅಬ್ಬಾಸ್ ಗೂನಡ್ಕ ಅವರನ್ನು ಶಾಲು ಹಾಕಿ, ಫಲ ಪುಷ್ಪ, ನೆನೆಪಿನ ಫಲಕ ನೀಡಿ ಗೌರವಿಸಿ, ಮುಂದಿನ ವಿಶ್ರಾಂತಿ ಜೀವನವು ಸುಖಕರವಾಗಲಿ ಎಂದು ಹಾರೈಸಿದರು.