ಅಧ್ಯಕ್ಷರಾಗಿ ಫಾತಿಮತ್ ಅಫ್ರತ್, ಪ್ರ.ಕಾರ್ಯದರ್ಶಿಯಾಗಿ ರಮ್ಲತ್ ಬಾನು
ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಹಾಸ್ಟಲ್ ಯೂನಿಯನ್ ಅಧ್ಯಕ್ಷರಾಗಿ ತೃತೀಯ ಶರೀಅತ್ ವಿಭಾಗದ ಫಾತಿಮತ್ ಅಫ್ರಾ ಮದ್ದಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ತೃತೀಯ ಬಿ.ಎ ವಿಭಾಗದ ರಮ್ಲತ್ ಬಾನು ಮದ್ದಡ್ಕ ಹಾಗೂ ಕಾರ್ಯದರ್ಶಿಯಾಗಿ ದ್ವಿತೀಯ ಬಿ.ಕಾಂ ವಿಭಾಗದ ಶಿಮ್ನ ಮುತ್ತಲಿಬ್ ಬಂಟ್ವಾಳ ಚುನಾಯಿತರಾಗಿದ್ದಾರೆ.
ಧಾರ್ಮಿಕ ವಿಭಾಗದ ಮಖ್ಯಸ್ಥರಾಗಿ ತೃತೀಯ ಶರೀಅತ್ ವಿಭಾಗದ ಸುಫೈರತ್ ಮಡಿಕೇರಿ, ದ್ವಿತೀಯ ಪಿ.ಯು ಕಲಾ ವಿಭಾಗದ ಜುಮೈಲ ಕೊಡಗು, ಆಹಾರ ವಿಭಾಗದ ಮುಖ್ಯಸ್ಥರಾಗಿ ದ್ವಿತೀಯ ಬಿ.ಕಾಂ ವಿಭಾಗದ ಫಾತಿಮತ್ ರಿಹಾನ ಸಕಲೇಶಪುರ, ದ್ವಿತೀಯ ಪಿ.ಯು ವಿಜ್ಞಾನ ವಿಭಾಗದ ಮುಫೀದ ಸಕಲೇಶ್ಪುರ, ಹೈಜೀನ್ ವಿಭಾಗದ ಮುಖ್ಯಸ್ಥರಾಗಿ ತೃತೀಯ ಶರೀಅತ್ ವಿಭಾಗದ ಫಾತಿಮತುಲ್ ಅಫೀಫ ಬದ್ಯಾರ್, ದ್ವಿತೀಯ ಪಿ.ಯು ವಾಣಿಜ್ಯ ವಿಭಾಗದ ನಿಶ್ಮಾ ಕೊಡಗು, ದ್ವಿತೀಯ ಬಿ.ಎ ವಿಭಾಗದ ಸಾನಿಯಾ ಕೊಡಗು, ಶಿಸ್ತು ಸಮಿತಿಯ ಮುಖ್ಯಸ್ಥರಾಗಿ ದ್ವಿತೀಯ ಬಿ.ಕಾಂ ವಿಭಾಗದ ಶೈನಾಝ್ ಬಾನು ಹಾಸನ, ದ್ವಿತೀಯ ಪಿ.ಯು ವಾಣಿಜ್ಯ ವಿಭಾಗದ ತಶ್ಫಿಯಾ ಕೊಡಗು, ವಿಧ್ಯಾಭ್ಯಾಸ ವಿಭಾಗದ ಮುಖ್ಯಸ್ಥರಾಗಿ ಪ್ರಥಮ ಬಿ.ಕಾಂ ವಿಭಾಗದ ಸಾನಿಯಾ ಕೊಡಗು, ದ್ವಿತೀಯ ಕಾಮರ್ಸ್ ವಿಭಾಗದ ಮೆಹಕ್ ಶಿವಮೊಗ್ಗ, ದ್ವಿತೀಯ ವಿಜ್ಞಾನ ವಿಭಾಗದ ಲುಬಾಬ ಮದ್ದಡ್ಕ, ಆರೋಗ್ಯ ವಿಭಾಗದ ಮುಖ್ಯಸ್ಥರಾಗಿ ದ್ವಿತೀಯ ಕಾಮರ್ಸ್ ವಿಭಾಗದ ಮುರ್ಶಿದಾ ನಾವೂರು, ದ್ವಿತೀಯ ಬಿ.ಎ ವಿಭಾಗದ ಝಹ್ರ ಮಂಡ್ಯ, ಸ್ಪೋರ್ಟ್ಸ್ ವಿಭಾಗದ ಮುಖ್ಯಸ್ಥರಾಗಿ ದ್ವಿತೀಯ ಪಿ.ಯು ಕಲಾ ವಿಭಾಗದ ಶಿಫಾನ ಹಾಸನ, ದ್ವಿತೀಯ ಬಿ.ಕಾಂ ವಿಭಾಗದ ಜಸ್ನ ಕೊಡಗು, ಮೀಡಿಯಾ ವಿಭಾಗದ ಮುಖ್ಯಸ್ಥರಾಗಿ ದ್ವಿತೀಯ ಕಾಮರ್ಸ್ ವಿಭಾಗದ ಝಕಿಯ ನೆಲ್ಯಾಡಿ, ದ್ವಿತೀಯ ವಿಜ್ಞಾನ ವಿಭಾಗದ ಫರ್ಹತ್ ತುರ್ಕಳಿಕೆ ಅವರನ್ನು ಆಯ್ಕೆ ಮಾಡಲಾಗಿದೆ. ಸಾಂಸ್ಕೃತಿಕ ಮತ್ತು ಸ್ಕಿಲ್ ಡೆವಲಪ್ಮೆಂಟ್ ವಿಭಾಗದ ಮುಖ್ಯಸ್ಥರಾಗಿ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ಹೆಚ್ಚಿನ ಹೊಣೆಗಾರಿಕೆಯನ್ನು ನೀಡಲಾಯಿತು. ಚುನಾವಣಾಧಿಕಾರಿಯಾಗಿ ಸಂಸ್ಥೆಯ ಎಡ್ಮಿನಿಷ್ಟ್ರೇಶನ್ ಅಸಿಸ್ಟೆಂಟ್ ಶಬ್ನಾ ಪುತ್ತೂರು, ವಾರ್ಡನ್ ಮುಬೀನ ಮಡಿಕೇರಿ, ನಸೀಮ ಮಡಿಕೇರಿ ಸಹಕರಿಸಿದರು.