ಪುತ್ತೂರು: ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸುದಾನ ವಸತಿ ಶಾಲೆಯ 12 ವಿದ್ಯಾರ್ಥಿಗಳು ಪದಕ ವಿಜೇತರಾಗಿದ್ದು, ಇದರಲ್ಲಿ 11 ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಟಾಕೂಟಕ್ಕೆ ಆಯ್ಕೆಗೊಂಡಿರುತ್ತಾರೆ.
ಇವರಿಗೆ ಶಾಲಾ ದೈಹಿಕ ಶಿಕ್ಷಕರು ಮತ್ತು ಶ್ರೀನಿಧಿ ಆರ್ಯಾಪು ತರಬೇತಿ ನೀಡಿರುತ್ತಾರೆ. ರಿಹಾನ್ (8ನೇ) ಶಾಟ್ ಪುಟ್ ಮತ್ತು ಡಿಸ್ಕಸ್ ನಲ್ಲಿ ಪ್ರಥಮ, ಮೊಹಮ್ಮದ್ ರಿಯಾನ್ (8ನೇ) ಶಾಟ್ ಪುಟ್ ನಲ್ಲಿ ತೃತೀಯ, ದಿವಿನ್ ಪೊನ್ನಣ್ಣ (8ನೇ) 100ಮೀ, 200 ಮೀ ತೃತೀಯ ಸ್ಥಾನ, ತನ್ಮಯ್ (9ನೇ) 1500 ಮೀ ತೃತೀಯ ಸ್ಥಾನ, ಶಶಾಂಕ್ (9ನೇ) 400 ಮೀ ತೃತೀಯ ಸ್ಥಾನ, ಪ್ರತೀಕಾ(10ನೇ) ಜಾವೆಲಿನ್ ನಲ್ಲಿ ತೃತೀಯ ಸ್ಥಾನ, ಗಗನ್ (10ನೇ) 100ಮೀ, 200ಮೀ, ನಲ್ಲಿ ದ್ವಿತೀಯ, 4*400 ನಲ್ಲಿ ಪ್ರಥಮ, 4*100 ನಲ್ಲಿ ತೃತೀಯ ಸ್ಥಾನ, ಮನೀಶ್ (10ನೇ) 400 ಮೀ ನಲ್ಲಿ ದ್ವಿತೀಯ, 4*100 ರಿಲೆಯಲ್ಲಿ, 4*400 ಮೀ ನಲ್ಲಿ ಪ್ರಥಮ, ಅಭೀನ್ (10ನೇ) 4*400 ಮೀ ರಿಲೆಯಲ್ಲಿ ಪ್ರಥಮ, ಸಮೀಹ್ (9ನೇ) 4*100 ಮೀ ರಿಲೆಯಲ್ಲಿ ತೃತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರನ್ನು ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್, ಶಾಲಾ ಆಡಳಿತಾಧಿಕಾರಿಗಳಾದ ಸುಶಾಂತ್ ಹಾರ್ವಿನ್, ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಅಭಿನಂದಿಸಿದ್ದಾರೆ.
