ಪುತ್ತೂರು: ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಹಿ. ಪ್ರಾ. ಶಾಲೆ ಸವಣೂರುನಲ್ಲಿ ನಡೆದ ವಲಯ ಮಟ್ಟದ ಪ್ರೌಢಶಾಲಾ ಕಬಡ್ಡಿ ಪಂದ್ಯಾಟ 2025-26 ಇದರಲ್ಲಿ 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಸಾಂದೀಪನಿ ವಿದ್ಯಾಸಂಸ್ಥೆ ಪ್ರಥಮ ಸ್ಥಾನದೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.
ಕೃಪಾನ್ , ತೀಕ್ಷಣ್, ತನುಶ್ ಶ್ಲೋಕ್, ಮನೀಶ್,ಗುರುಕಿರಣ್,ತುಷಾರ್, ವಿವೇಕ್,ಅಮಿತ್ ಎಸ್ ಬಿ , ಸೃಜನ್ ರೈ ಬಿ ಎಸ್,ಮನ್ವಿತ್, ಪ್ರಸ್ತುತ್, ದರ್ಶನ್ ತಂಡವನ್ನು ಪ್ರತಿನಿಧಿಸಿದರು.
ಕೃಪಾನ್ ಉತ್ತಮ ಸವ್ಯಸಾಚಿ ಆಟಗಾರ ಪ್ರಶಸ್ತಿ ಪಡೆದು ಕೊಂಡರು. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ ಹಾಗೂ ಜಯಚಂದ್ರ ತರಬೇತಿ ನೀಡಿರುತ್ತಾರೆ.
ಎಂದು ಸಂಸ್ಥೆಯ ಮುಖ್ಯೋಪಾಧ್ಯಾಯ ಪ್ರಸನ್ನ ಕೆ ಇವರು ತಿಳಿಸಿರುತ್ತಾರೆ.