ಉಪ್ಪಿನಂಗಡಿ: ಇಲ್ಲಿನ ರಾಮನಗರದ ಶ್ರೀ ಶಾರದಾ ಕಲಾ ಮಂದಿರದಲ್ಲಿ ನಡೆಯುವ 31ನೇ ವರ್ಷದ ಶ್ರೀ ಶಾರದೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಹಿರೇಬಂಡಾಡಿ ಶಾಖೆಯ ವ್ಯವಸ್ಥಾಪಕ ಶಶಿಧರ ಹೆಗ್ಡೆ ಬಿಡುಗಡೆಗೊಳಿಸಿದರು.
ಈ ಸಂದರ್ಭ ಸಮಿತಿಯ ಅಧ್ಯಕ್ಷ್ ಚಂದ್ರಶೇಖರ ಮಡಿವಾಳ, ಉಪಾಧ್ಯಕ್ಷ ವಿದ್ಯಾಧರ ಜೈನ್ ಪದ್ಮವಿದ್ಯಾ, ಸಮಿತಿಯ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಕಾರ್ಯಾಧ್ಯಕ್ಷ ರಾಮಚಂದ್ರ ಮಣಿಯಾಣಿ, ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ ಕಂಗ್ವೆ, ಕಾರ್ಯದರ್ಶಿ ದೀಪಕ್ ಪೈ, ಪ್ರಮುಖರಾದ ಗಣೇಶ ಭಂಡಾರಿ, ಸುರೇಶ ಅತ್ರೆಮಜಲು, ಜಯಂತ ಪೊರೋಳಿ, ರವಿ ರಾಮನಗರ, ರಘುರಾಮ, ವೇಣುಗೋಪಾಲ ಸಂಗಮ್, ಎನ್. ಶ್ಯಾಮಲಾ ಶೆಣೈ, ಉಷಾಚಂದ್ರ ಮುಳಿಯ, ಸಂತೋಷ್, ನಾಗರಾಜ್ ರಾಮನಗರ ಮತ್ತಿತರರು ಉಪಸ್ಥಿತರಿದ್ದರು.