ಪುತ್ತೂರು : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ, ನೇತ್ರಾವತಿ ವಲಯ, ಪುತ್ತೂರು ತಾಲೂಕು, ದ.ಕ. ಇದರ ವತಿಯಿಂದ ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ(ರಿ.) ಪುತ್ತೂರು, ಸರಸ್ವತಿ ಸದನ, ಸಂಟ್ಯಾರು ಇದರ ಸಹಕಾರದೊಂದಿಗೆ 48 ದಿನಗಳ ಉಚಿತ ಯೋಗ ತರಗತಿ, ಸಂಟ್ಯಾರು ಸರಸ್ವತಿ ಸದನದಲ್ಲಿ ಅಕ್ಟೋಬರ್ 26ರಂದು ಮುಖ್ಯ ಅಭ್ಯಾಗತ ಪುತ್ತೂರು ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ರಾಜ್ಗೋಪಾಲ್ ಬಾಳೆಗುಳಿ ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿದರು.

ತಾಲೂಕು ವಿಸ್ತರಣಾ ಪ್ರಮುಖರಾದ ಪುಷ್ಪರಾಜ ಪ್ರಾಸ್ತಾವಿಕ ಮಾತುಗಳನ್ನಾಡಿದರು.ರವೀಂದ್ರ ಮುಂಡೂರು ಅಧ್ಯಕ್ಷೀಯ ಮಾತುಗಳನ್ನಾಡಿದರು.
ರೇಖಾ ಮತ್ತು ಇತರ ಯೋಗಬಂಧುಗಳ ಭಜನೆ ನಡೆಯಿತು.
ರೋಹಿಣಿ , ರವೀಂದ್ರ , ಪುಷ್ಪಲತಾ , ಚಂದ್ರನಾಥ ಅನುಭವ ಹಂಚಿಕೊಂಡರು. ಉಮಾವತಿ ಪ್ರಾರ್ಥಿಸಿದರು.ಶಾರದಾ ಸ್ವಾಗತಿಸಿದರು. ಪ್ರಿಯಾಂಕ ವಂದಿಸಿದರು. ವಿನಯರವರ ನಿರೂಪಿಸಿದರು.
ಯೋಗ ಶಿಕ್ಷಣದಲ್ಲಿ 10ರಿಂದ ಮೇಲ್ಪಟ್ಟ ಎಲ್ಲಾ ವಯಸ್ಸಿನ ಪುರುಷರು, ಮಹಿಳೆಯರು ಭಾಗವಹಿಸಬಹುದು. ನಿತ್ಯತರಗತಿಗಳು ಬೆಳಗ್ಗೆ ಗಂಟೆ 5.00ರಿಂದ 6.30ರವರೆಗೆ ನಡೆಯಲಿದೆ. ಕೇಂದ್ರ ಸಮಿತಿಯಿಂದ ಶಿಕ್ಷಣ ಪಡೆದ ನುರಿತ ಶಿಕ್ಷಕ ವರ್ಗದವರಿಂದ ಯೋಗಾಸನ, ಪ್ರಾಣಾಯಾಮ, ಧ್ಯಾನ, ಅಗ್ನಿಹೋತ್ರ, ಸೂರ್ಯ ನಮಸ್ಕಾರ, ಆಯುರ್ವೇದ, ಆಹಾರ ಪದ್ಧತಿ, ಭಾಷಣ ಕಲೆ, ಭಜನೆ, ಸತ್ಸಂಗಗಳನ್ನು ಸಮಿತಿ ವತಿಯಿಂದ ಉಚಿತವಾಗಿ ಹೇಳಿಕೊಡಲಾಗುವುದು. ಸೇರಲಿಚ್ಚಿಸುವವರು 9448601642, 9480301949 ಅನ್ನು ಸಂಪರ್ಕಿಸಬಹುದಾಗಿದೆ.