ಉಪ್ಪಿನಂಗಡಿ: ಕರ್ತವ್ಯ ಮುಗಿಸಿ ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಬಸ್ ಡ್ರೈವರ್ ರೊಬ್ಬರನ್ನು ಬೈಕೊಂದರಲ್ಲಿ ಬಂದ ಇಬ್ಬರು ಅಡ್ಡಗಟ್ಟಿ ಹಲ್ಲೆ ಮಾಡಿ ಹಣ ದರೋಡೆಗೈದ ಘಟನೆ ಗುರುವಾರ ರಾತ್ರಿ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಇಳಂತಿಲ ಗ್ರಾಮದ ಅಲೆಕ್ಕಿ ಎಂಬಲ್ಲಿ ನಡೆದಿದೆ.
ಕೊಕ್ಕಡ ಗ್ರಾಮ ನಿವಾಸಿ ಖಾಸಗಿ ಬಸ್ ಚಾಲಕ ಮ್ಯಾಕ್ಸಿಮ್ ಪಿಂಟೋ (47) ಎಂಬವರು ಕರ್ತವ್ಯ ಮುಗಿಸಿ ಬಂದಾರಿನಿಂದ ಮುರ ಮಾರ್ಗವಾಗಿ ಉಪ್ಪಿನಂಗಡಿ ಕಡೆಗೆ ಬರುವಾಗ ಇಳಂತಿಲ ಗ್ರಾಮದ ಅಲೆಕ್ಕಿ ಎಂಬಲ್ಲಿ ಬೈಕ್ ನಿಂದ ಹಿಂಬಾಲಿಸಿಕೊಂಡು ಬಂದ ಹೆಲ್ಮೆಟ್ ದಾರಿ ಇಬ್ಬರು ತನ್ನ ಬೈಕನು ಅಡ್ಡಗಟ್ಟಿ ತನಗೆ ಹಲ್ಲೆ ನಡೆಸಿ ತನ್ನಲ್ಲಿದ್ದ ಸುಮಾರು 4000 ನಗದು ಹಣವನ್ನು ದೋಚಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಸ್ಥಳ ಮಹಜರು ನಡೆಸಿ ತನಿಖೆ ಕೈಗೊಂಡಿದ್ದಾರೆ.
