ಪುತ್ತೂರು:ಒಡಿಯೂರುಶ್ರೀ ಗ್ರಾಮ ವಿಕಾಸ ಯೋಜನೆಯ ಉಪ್ಪಳಿಗೆ ಘಟ ಸಮಿತಿ ಅಧ್ಯಕ್ಷರು ದಾಮೋದರ ಪಾಟಾಳಿ ಉಪ್ಪಳಿಗೆ, ಕಾರ್ಯದರ್ಶಿಯಾಗಿ ಗೀತಾ ಉಪ್ಪಳಿಗೆ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸವಿತಾ ಉಪ್ಪಳಿಗೆ, ಜೊತೆ ಕಾರ್ಯದರ್ಶಿಯಾಗಿ ಶೇಷನ್ ಬೆಟ್ಟಂಪಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಲೋಕನಾಥ ಆಚಾರ್ಯ ಚೆಲ್ಯಡ್ಕ, ದಾಖಲಾತಿ ಸಮಿತಿಗೆ ಜ್ಯೋತಿ ಉಪ್ಪಳಿಗೆ, ಯಶೋಧಾ ಅರಂತನಡ್ಕ, ಪ್ರೇಮ ಇರ್ದೆ, ಪುಷ್ಪರಾಜ್ ಬೆಟ್ಟಂಪಾಡಿ ಇವರನ್ನು ಆಯ್ಕೆ ಮಾಡಲಾಯಿತು.
ಘಟ ಸಮಿತಿಯ ಅಧ್ಯಕ್ಷ ಪ್ರಜ್ವಲ್ ರೈ ತೊಟ್ಲರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಮೇಲ್ವಿಚಾರಕಿ ಸವಿತಾ ರೈ, ಸಂಯೋಜಕಿ ಜಯಂತಿ, ಸೇವಾ ದೀಕ್ಷಿತರಾದ ಅಶ್ವಿನಿ ದೂಮಡ್ಕ, ಲೀಲಾವತಿ ದೂಮಡ್ಕ, ಸವಿತಾ ಉಪ್ಪಳಿಗೆ, ಸದಾಶಿವ ರೈ ಹಾಗೂ ಸಂಘದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.